ಉಸನ್ಯಾಸಗ್ರಂಥಮಾಲೆ

೧೧

ವಿದ್ವಾನ್‌; ಶಿರೋಮಣಿ, ಎನ್‌, ಎ,

೯೯ಟಿಕ ವಿಶ್ವವಿದ್ಯಾಲಯ ಧಾರನಾಡ

ನನಂಬಕ ೧೯೫೭

UNIVERSAL LIBRARY

OU 198064

AdVddl | IVSHAINN

ko UNIVERSITY mJ No. ಗ್ದ , Accession No. |, 1] ಇಸ್ರಾ ುಕಕ್ತೂ ಓರ * ನಂಗ ೫ನ

This boo ld b~ ೨೨377೮6 on & before the date : arked below.

ಸಂಸ್ಕೃತ ಕವಯಿತ್ರಿಯರು

ಫೆ, ಟ್ರಿ ಪಾಂಡುರಂಗಿ ವಿದ್ವಾನ್‌, ಶಿರೋಮೆಣಿ, ಎಮ್‌, ಎ,

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನವಂಬರ ೧೯೫೭

ಕರ್ನಾಟಕ ಸಾಹಿತ್ಯ ಮಂದಿರ, ಧಾರವಾಡ.

ಪ್ರಕಾಶಕರು ಎಸ್‌. ಎಸ್‌. ಒಡೆಯರ, ಎಮ್‌.ವಎ,, ಎಲ್‌ಎಲ್‌. ಬಿ, ರಜಿಸ್ಟ್ರಾರ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಮೊದಲನೆಯ ಮುದ್ರಣ

೨,೦೦೦ ಪ್ರತಿಗಳು

ಬೆಲೆ ; ಆಣೆ

ಮುಡ್ರಕರು : ಚೆ. ಜಿ. ಮತ್ತು ಎ. ಎಸ್‌. ಜಕಾರ ಕರ್ನಾಟಕ" ಶ್ರಂಟಂಗ ವರ್ಕ್ಸ. ಧಾರವಾಡ

ಮಾಲೆಯ ಮುನ್ನುಡಿ

ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ಸಮಿತಿಯು ಸಿದ್ಧಪಡಿಸಿದ ಯೋಜನೆಯ ಮೇರೆಗೆ ಮೊದಲನೆಯ ಉಪನ್ಯಾಸ ಮಾಲೆ ೧೯೫೨ನೆಯ ನವಂಬರ್‌ ತಿಂಗಳೆಲ್ಲಿ ಗದಗಿನಲ್ಲಿ ನೆರವೇರಿತು. ವಿಶ್ವವಿದ್ಯಾಲಯದ ಮತ್ತು ಇದಕ್ಕೆ ಸೇರಿದ ಕಾಲೇಜುಗಳ ಪ್ರಾಧ್ಯಾ ಪಕರು ಸಾಹಿತ್ಯ, ವಿಜ್ಞಾನ, ಸಾಮಾಜಿಕಶಾಸ್ತ್ರ ಮೊದಲಾದ ಶಾಖೆ ಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಆಯ್ದುಕೊಂಡು ಶಾಸ ಸಮ್ಮತವಾದ ಸರಣಿಯಲ್ಲಿ ಜನಸಾಮಾನ್ಯಕ್ಕೆ ತಿಳಿಯುವ ಕೈಲಿ ಯಲ್ಲಿ ಉಪನ್ಯಾಸಗಳನ್ನು ಕನ್ನಡದಲ್ಲಿ ಕೊಟ್ಟಿರು. ವಿಶ್ವವಿದ್ಯಾ ಲಯದ ಜ್ಞಾನಭಂಡಾರನನ್ನು ಕಾಲೇಜು ತರಗತಿಗಳಿಗೆ ಮೀಸ ಲಾಗಿ ಇಡದೆ ಅದರ ಅಲ್ಪಾಂಶವನ್ನಾದರೂ ಮಹಾಜನರ ಮನೆ ಬಾಗಿಲಿಗೆ ಒಯ್ದು ಮುಟ್ಟ ಸಬೇಕೆಂದು ಮಾಡಿದ ಪ್ರಯತ್ನಕ್ಕೆ ನಮ್ಮ ನಿರೀಕ್ಷೆಗೆ ಮೀರಿದ ಮೆಚ್ಚಿಕೆಯೂ ಪ್ರೋತ್ಸಾಹವೂ ದೊರೆ ' ತುವು. ಅಂದು ಗದಗಿನಲ್ಲಿ 'ಪ್ರಾರಂಭಿಸಿದ ಉಪನ್ಯಾಸಮಾಲೆ ಈಚೆಗೆ ಉತ್ತರಕರ್ನಾಟಕದ ಹಲವು ಊರುಗಳಲ್ಲಿ ನಡೆದಿದೆ ಮುಂದೆಯೂ ನಡೆಯಲಿದೆ. ಇದು ನನ್ಮು ವಿಶ್ವವಿದ್ಯಾಲಯದ ಪ್ರತಿ ತಿಂಗಳ ಕಾರ್ಯಕ್ರಮವಾಗಿ ಪರಿಣಮಿಸಿದೆ.

ಇಂಥ ಉಪನ್ಯಾಸಗಳನ್ನು ವಿದ್ವಾಂಸರ ಮುಖದಿಂದ ಪ್ರತ್ಯಕ್ಸ ನಾಗಿ ಕೇಳುವ ಜನರಿಗೆ ಆಸಕ್ತಿಯೂ ತಿಳಿವಳಿಕೆಯೂ ಹೆಚ್ಚುವುದು ಸಹೆಜ. ಆದರೆ ಉಪನ್ಯಾಸದ ಮಾತು ಕೇಳಿದ ಕಿವಿಯಲ್ಲೇ ಕರಗಿ ಹೋಗುತ್ತದೆ; ಕೆಲವು ಕಾಲ ಕಳೆದ ಬಳಿಕ ಉಪನ್ಯಾಸದ ವಿನರ ಗಳನ್ನು ನೆನಪಿಗೆ ತಂದುಕೊಳ್ಳು ವುದು ಸಭೆಯಲ್ಲಿದ್ದ ವರಿಗೇ ಅಶಕ್ಕ

iv ವಾಗುತ್ತದೆ. ಬೇಕೆ ಊರಿನನರಂಶೂ ಇವುಗಳ ` ಲಾಭವನ್ನು ಪಡೆ ಯುವ ಹಾಗೆಯೇ ಇಲ್ಲ. ಆದಕಾರಣ ಉಪನ್ಯಾಸಗಳನ್ನು ಕೊಡಿಸಿ ದಷ್ಟಕ್ಕೇ ತೃಪ್ತಿಗೊಳ್ಳದೆ, ಇವುಗಳಲ್ಲಿ ಕೆಲವನ್ನಾದರೂ ಗ್ರಂಥರೂಪ ದಲ್ಲಿ ಬರೆಯಿಸಿ, ಸುಲಭವಾದ ಬೆಲೆಗೆ ಪ್ರಕಟಿಸಿ, ಕನ್ನಡ ಜನದಲ್ಲೆಲ್ಲ ಹರಡಬೇಕೆಂಬ ಸೂಚನೆ ಸಹೆಜವಾಗಿಯೇ ಬಂದಿತು. ಇದನ್ನು ವಿಶ್ವವಿದ್ಯಾಲಯದ ಪ್ರಕಟನ ಸಮಿತಿ ಉತ್ಸಾಹದಿಂದ ಆಂಗೀಕರಿ ಸಿತು. ಬಗೆಯ ಪ್ರಯತ್ನ ಮೈಸೂರು ವಿಶ್ವನಿದ್ಯಾನಿಲಯದಲ್ಲಿ ಹಿಂದೆಯೇ ನಡೆದು ಇಂಥಸೊಂದು ಗ್ರಂಥಮಾಲೆ ಅಲ್ಲಿ ಜನಪ್ರಿಯ ವಾಗಿ ಪರಿಣಮಿಸಿದ ಸಂಗತಿ ನಮ್ಮ ಸಂಕಲ್ಪಕ್ಕೆ ಮತ್ತಷ್ಟು ಹುರುಪನ್ನು ಹೊದ ತು. ಹೀಗೆ ವಿಶ್ವವಿದ್ಯಾಲಯದ ಜನತಾಶಿಕ್ಷಣ ಕಾರ್ಯವು. « ಉಪನ್ಯಾಸ ಗ್ರಂಥಮಾಲೆ 'ಯ ಮೂಲಕ ಇನ್ನೊಂದು ಹೆಜ್ಜೆಯನ್ನು ಮುಂದಕ್ಕೆ ಇರಿಸಿದೆ.

ನಮ್ಮ ಪ್ರಾರ್ಥನೆಗೆ ಮನ್ನಣೆಕೊಟ್ಟು, ಪ್ರತಿಫಲದ ಅಪೇಕ್ಷೆ ಇಲ್ಲದೆಯೆ, ಉಪನ್ಯಾಸಕರು ಪುಸ್ತಕಗಳನ್ನು ಬರೆದು ಕೊಡುತ್ತಿರು ವುದು ಶ್ಲಾಘ್ಯುವಾದ ವಿಷಯ; ಇದಕ್ಕಾಗಿ ಲೇಖಕ ಮಹಾಶಯ ರಿಗೆ ವಿಶ್ವವಿದ್ಯಾಲಯದ ವಂದನೆಗಳನ್ನು ಸಂತೋಷದಿಂದ ಸಲ್ಲಿಸು ತ್ತೇನೆ. «ಉಪನ್ಯಾಸ ಗ್ರಂಥಮಾಲೆ? ಕನ್ನಡಿಗರ ಪ್ರೀತಿಗೆ ಪಾತ್ರವಾಗಲೆಂದು ಇದರೆ ಪ್ರಕಾಶನದಿಂದ ನನ್ಮು ಜನತೆಯ ಜ್ಞಾನಾಸಕ್ತಿ ಪುಸ್ಟಿಗೊಳ್ಳಲೆಂದು ಹಾಕೈಸುತ್ತೇನೆ.

ಡಿ. ಸಿ. ಪಾವಟೆ ಉಪಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ

ಧಾರೆವಾಡ ೧-೧-೧೯೫೫

ವಿಜ್ಞಾಪನೆ

ವಿದ್ಯಾರ್ಥಿಯಾಗಿದ್ದಾಗ ನಿಜ್ಜಿಕೆಯ ಕೆಲವು ರಸವತ್ತಾದ ಪದ್ಯ ಗಳನ್ನು ಓದಿ ಉಂಟಾದ, ಅವಳು ಕರ್ನಾಟಕದನಳೆಂದು ತಿಳಿದು ಇನ್ನೂ ಹೆಚ್ಚಾದ ನನ್ನ ಆಸ್ಥೆ ಯು ಅವಳ ಕೃತಿಗಳ ಹೆಚ್ಚಿನ ಅಭ್ಯಾ ಸಕ್ಳೆ ನನ್ನನ್ನು ತೊಡಗಿಸಿತು. ಮುಂದೆ ಕರ್ನಾಟಕದ ಇನ್ನೋರ ಸಂಸ್ಕೃತ ಕವಯಿತ್ರಿ ಗಂಗಾದೇವಿಯ ಕೃತಿಯು ನನ್ನ ಮನಸ್ಸನ್ನು ಸೆಳೆಯಿತು. ,ಮಿತ್ರರಾದ ಶ್ರೀ. ಚೆನ್ನನೀರ ಕಣವಿಯವರ ಪ್ರೇರಣೆ ಯಿಂದ ಇನ್ನಿತರ ಸಂಸ್ಕೃತ ಕವಯಿತ್ರಿಯರ ಕೃತಿಗಳನ್ನೂ ಓದುವ ಸಂದರ್ಭವೊದಗಿ ರಾಮದುರ್ಗದಲ್ಲಿ ನಡೆದ ವ್ಯಾಸಂಗ ವಿಸ್ತರಣೋ ಪನ್ಯಾಸ ಶಿಬಿರದಲ್ಲಿ ಸಂಸ್ಕೃತ ಕವಯಿತ್ರಿಯರು” ಎಂಬ ವಿಷಯ ವಾಗಿ ಕೊಟ್ಟ ಉಪನ್ಯಾಸವು ಈಗ ಚಿಕ್ಕ ಹೊತ್ತಿಗೆಯ ರೂಪ ದಲ್ಲಿ ಪ್ರಕಟವಾಗುತ್ತಿದೆ.

ಸಂಸ್ಕೃತ ಕಾವ್ಯಗಳಲ್ಲಿ ಬರುವ ರಸವತ್ತಾದ ಭಾಗಗಳನ್ನು ಸಹೈದಯರಾದ ಮಿತ್ರರೊಡನೆ ಚರ್ಚಿಸುವದೂ ಉಪನ್ಯಾಸ ಕೊಡುನದೂ ಸುಲಭ ಹಾಗು ಸಂತೋಷದ ವಿಷಯ. ಅದರೆ ಹರಟಿಗಳನ್ನು ಪುಸ್ತಕದ ರೂಪದಲ್ಲಿ ಸಿದ್ಧಪಡಿಸುವದು ಕಷ್ಟ- ಸಾಧ್ಯವಾದ ಕೆಲಸ. ಹರಟಿ ಅಥನಾ ಉಪನ್ಯಾಸಗಳಲ್ಲಿ ಶ್ಲೋಕ ಗಳು, ಅನುವಾದ, ವಿಮರ್ಶೆ, ಸಂಶೋಧನೆ ಎಲ್ಲವನ್ನೂ ನಿರರ್ಗಳ ವಾಗಿ ಬೆರಸುತ್ತ ಹೋಗಬಹುದು. ಆದರೆ ಪುಸ್ತಕರೂಪದಲ್ಲಿ ಬರೆಯಲು ಹೊರಟರೆ ಪಂಡಿತರಿಗೂ, ಪಾಮರರಿಗೂ ತೃಪ್ತಿಯಾಗು ನಂಥ ಪಡಿಯಚ್ಚಿನಲ್ಲಿ ಇವೆಲ್ಲವನ್ನೂ ಬೆಕೆಯಿಸುವದು ಕಸ್ಟಸಾಧ್ಯ ವಾಗುತ್ತದೆ. ಆದರೂ ಬರೆಯಲೇಬೇಕಾದ ಸಂದರ್ಭ ಬಂದೆದ್ದ

vi

ರಿಂದ ಸಂಸ್ಕೃತ ಕನಯಿತ್ರಿಯರ ಬಿಡಿಪದ್ಯಗಳ ಮತ್ತು ಪೂರ್ಣ ಕೃತಿಗಳೆ ಪರಿಚಯವನ್ನು ಮಾತ್ರ ಮಾಡಿಕೊಡುವ ದೃಷ್ಟಿಯಿಂದ ಧಾರಾವಾಹಿಯಾದ ಹರಟಿಯ ಶೈಲಿಯಲ್ಲಿಯೇ ಚಿಕ್ಕ ಹೊತ್ತಿಗೆ ಯನ್ನು ಬರೆದು ಮುಗಿಸಿದ್ದೇನೆ. ಕೆಲವು ಕಡೆಗೆ ವಿವರಗಳು ಹೆಚ್ಚಾಗಿದ್ದರೆ ಇನ್ನು ಕೆಲವು ಕಡೆಗೆ ನನಗೆ ಹೇಳಬೇಕಾದುದನ್ನೆಲ್ಲ ಹೇಳಿದ ಶೃಶ್ತಿಯೆನಿಸಿಲ್ಲ.. ನನ್ನ ಯೋಗ್ಯತೆಯ ಮತ್ತು ಸ್ಥಳದ ಪರಿಮಿತಿಯನ್ನನುಲಕ್ಷಿಸಿ ಇಲ್ಲಿಯ ಲೋಪ-ದೋಷಗಳನ್ನೆಲ್ಲ ಸಹೃದಯರು ಕ್ಷಮಿಸಬೇಕಾಗಿ ಪ್ರಾರ್ಥನೆ.

ಉಪನ್ಯಾಸವನ್ನು ಕೊಡಲು ಅವಕಾಶವಿತ್ತು ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಕರ್ನಾಟಕ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು.

೨೪-೧೦-೫೭ ಜೆ, ಟಿ, ಪಾಂಡುರಂಗಿ ಬಲಿ ಪಾಡ್ಯಮಿ. ಕರ್ನಾಟಕ ಕಾಲೇಜ, ಧಾರವಾಡ.

ಅನುಕ್ರಮಣಿಕೆ

ಸಂಸ್ಕೃತ ಕವಯಿತ್ರಿಯರು ನಿಜಯಾಂಬಿಕೆ ಗಂಗಾದೇವಿ ತಿರುಮಲಾಂಜೆಿ ರಾಮಭೆದ್ರಾಂಜಿ

ಸಂಸ್ಕೃತ ಕನಯಿತ್ರಿ ಯರ ಸುಭಾಸಿತಗಳು

ಸಂದರ್ಭ ಗ್ರಂಥಗಳು ಮತ್ತು ಲೇಖನಗಳು |

೧೧

೩೪

೫೬

೬೭

೩೬೫

೭೯

೧೦.

೧೧.

ಉಪನ್ಯಾಸ ಗ್ರಂಥಮಾಲೆ

. ಭವಭೂತಿ

ಡಾ. ಕೆ. ಕೃಷ್ಣಮೂರ್ತಿ, ಎನು,ಎ,ಬಿ.ಟ., ಸಿಎಚ್‌.ಡಿ,

.- ಮನೋರೋಗಗಳು

ಪ್ರೊ. ಎನ್‌. ಆರ್‌. ಕುಲಕರ್ಣಿ,:ಎಮ್‌.ಎ.,ಎಲ್‌ಎಲ್‌.ಬಿ.

ಪ್ರಥಮ ಪಂಚವಾರ್ಷಿಕ ಯೋಜನೆ ಹಾಗೂ ಒಕ್ಕಲತನ ಡಾ. ಎನ”. ಹಿ. ಪಾಟೀಲ, ಬಿ ಎಸ್‌.ಸಿ.(ಅಗ್ರಿ.), ಸಿಎಚ್‌.ಡಿ,

- ಗಾದೆಗಳು

ಪ್ರೊ. ಕೆ. ರಾಮಾನುಜನ್‌, ಎಂ.ಎ.

ಭಾರತದಲ್ಲಿ ಜಾತಿಪದ್ದತಿ ಡಾ. ವಿಕ್ರರ ಎಸ್‌. ಡಿಸೋಜಾ ಎಂ.ಎ. ಪಿಎಚ್‌.ಡಿ.

ಮುಂಬಯಿ ಕರ್ನಾಟಕದಲ್ಲಿಯ ಮುಖ್ಯ ಬೆಳೆ ಗಳನ್ನು ನಾಶ ಮಾಡುವ ಕೀಟಿಕ ಪಿಡುಗುಗಳ ಸನೂಕ್ಟಣೆ

ಪ್ರೊ ಎಸ್‌. ಎಸ್‌. ಕಟಗಿಹಳ್ಳಿ ಮಠೆ, ಎಂ.ಎಸ್‌ಸಿ,

ರಾಜಕೀಯ ಪಕ್ಷಗಳು ಪ್ರೊ. ಎನ್‌. ರಾಜಗೋಪಾಲರಾವ್‌, ಎಂ. ಎ,

ಸ್ವಾದಿ ಅರಸುಮನೆತನ ಫ್ರೊ. ಸ. ಸ. ಮಾಳವಾಡ, ಎಂ.ಎ.

ಮಕ್ಕಳ ಶಿಕ್ಷಣ ಡಾ. ಡಿ. ಎಸ್‌. ಕರ್ಕಿ, ಎಂ.ಎ. ಪಿಎಚ್‌.ಡಿ.

ಮೂಢ ನಂಬಿಕೆಗಳು ಪ್ರೊ. ಎಲ್‌. ಆರ್‌. ಹೆಗಡೆ, ಎಂ.ಎ.

ಸಂಸ್ಕ ತೆ ಕನಯಿತ್ರಿಯರು ಪ್ರೊ. ಜೆ. ಟಿ, ಪಾಂಡುರಂಗಿ, ಎಂ.ಎ.

ಬೆಲೆ ; ಪ್ರತಿ ಒಂದಕ್ಕೆ ಆಣೆ,

ಜರಾ ಟಿ ಸಂಸ್ಕತ ಕವಯಿತ್ರಿಯರು ಕ್ರ

ಪುರುಷರಂತೆ ಸ್ತ್ರೀಯರೂ ಕನಿಗಳಾಗಬಲ್ಲರು. ಕಾವ್ಕ ನಿರ್ಮಾಣಕ್ಟೆ ಅಗತ್ಯವಾದ ಸಂಸ್ಕಾರವು ಆತ್ಮಗತವಾಗಿದ್ದು ಸ್ರೀ ಪುರುಷರೆಯ ಲಿಂಗಭೇದವನ್ನು ಅವಲಂಬಿಸಿರುವದಿಲ್ಲ” ಎಂದು ೧೦ನೆಯ ಶತಮಾನದ ಕಾವ್ಕುಮೀಮಾಂಸಾಕರ್ತ್ಯ ರಾಜಶೇಖರನು ಎರಿ (೧0 ಹೇಳಿದ್ದಾ ನೆ.

« ಶೀಲಾ ವಿದ್ಯಾ ಮಾರುಲಾ ನೋರಿಕಾದ್ದಾ?

ಶಿ ಕಾವ್ಯವ" ಸರ್ತುವರ ಸಂತಿ ವಿಜಾ॥ ಸ್ತ್ರಿಯೋಪಿ ಶಿ (೫

ಬರಿದು ಧನದದೇವನು ಕೆಲ ಸಂಸ್ಕೃತ ಕವಯಿತ್ರಿಯರ ಹೆಸರು ಗಳನ್ನು ಉಲ್ಲೇಖಿಸುವನು.

ಕನೀಂದ್ರವಚನಸಮುಚ್ಚಯ, ಸದುಕ್ರಿಕರ್ಣಾಮೃತ, ಶಾರ್ಜಧರ ಪದ್ದತ್ರಿ ಸೂಕ್ತಿಮುಕ್ತಾನಲ್ಲಿ ಸುಭಾಹಿತಾವಲ್ಲಿ, ಮೊದಲಾದ ಸಂಸ್ಕೃತ ಸುಭಾಷಿತ ಗ್ರಂಥಗಳಲ್ಲಿಯೂ ಅಲಂಕಾರಶಾಸ್ತ್ರ ಗ್ರಂಥ ಗಳ 'ಲಯೂ ಸುಮಾರು ೩೨ ಜನ ಸಂಸ್ಕೃತ ಕವಯಿತ್ರಿಯ ರರ ಬಿಡಿ ಪದ್ಯಗಳು ಉಲ್ಲಿಖಿತವಾಗಿವೆ. ಜನ ಸಂಸ್ಕತ ಕವಯಿತ್ರಿಯರ ಸಂಪೂರ್ಣ ಕ್ಫ ತಿಗಳು ಉಪಲಬ್ಬವಾಗಿನೆ.

ಬಿಡಿಪದ್ಯಗಳೆನ. ಬರೆದ ಕನಯಿತಿ ತ್ರಿಯರಲ್ಲಿ ಕೀಲಾಭಟ್ಟುರಿಕಾ, ಗೌರೀ, ಪದ್ಮಾವತಿ ಭಾ ಇಂದುಲೇಖಾ, ಶ್ರಿಭುವನೆ ಸರಸ್ವತೀ ವಿದ್ಯಾವತೀ, ಸುಭದ್ರಾ ಮೊದಲಾದವರು ಕ. ರಾಗಿರುವರು- ಕೆಲವು ಕನಯಿತ್ರಿಯರ ಹೆಸರುಗಳು ಅರ್ಥಪೂರ್ಸ ವಾಗಿಯೂ ಮತ್ತೆ ಕೆಲವರವು ನಿನೋದಪೂಕ್ಲ್ಮವಾಗಿಯೂ ಇರು

ಸಿ

ಸಂಸ್ಕೃತ ಕವಯಿತ್ರಿ ಯರು

ನವು. ಓರ್ತಳೆ ಹೆಸರು « ಸರಸ್ಪಕೀಕುಟುಂಬದುಹಿತಾ' ಸರಸ್ವತಿಯ ಮನೆಯ ಮಗಳು. ಇನ್ನೋರ್ವಳು 6 ರಸವತೀ ಪ್ರಿಯಂವದಾ' ರಸಿಕೆ ಮತ್ತು ನಲ್ಮೆಯ ಮಾತಿನನಳು. ಮೂರನೆ ಯವಳು ಜಫಘೆನಚಸಲಾ'. ಇವಳು ಜಫುನಚನಲಾ ಎಂಬ ಹೆಸರಿನ ವೃತ್ತದಲ್ಲಿ ಪದ್ಯವನ್ನು ಬರೆದು ಹೆಸರನ್ನು ಪಡೆದಿರು ವಳು. ಮತ್ತೊಬ್ಬಳು « ವಿಕಟ ಥಿತಂಬಾ' ತನ್ನ ಪದ್ಯದಲ್ಲಿ ನಿಕಟ ನಿತೆಂಬಾ ಎಂಬ ಪದವನ್ನು ಪ್ರಯೋಗಿಸಿದ್ದರಿಂದ ಇವಳಿಗೆ ಭವ ಭೂತಿಯಂತೆ ಹೆಸರು ಬಂದಿದೆ. ಮಧುರವಾಣಿ, ಕಾಮಾಕ್ಷಿ ಮದಿರೇಕ್ಷಣಾ, ಮದಾಲಸಾ ಎಂಬ ಆಕರ್ಷಕ ಹೆಸರುಗಳೂ ಇನ್ನು ಕೆಲವರಿಗಿವೆ.

ಕವಯಿತ್ರಿಯರೆ ಕಾಲ, ದೇಶ, ಮತ್ತು ಜೀವನಚರಿತೆಯನ್ನು ತಿಳಿದುಕೊಳ್ಳೆಲು ಬಾಹ್ಯಸಾಧನೆಗಳೇನೂ ದೊರೆಯುನದಿಲ್ಲ. ಇವರ ಪದ್ಯಗಳೆನ್ನು ಉಲ್ಲೇಖಿಸಿರುವ ಸುಭಾಷಿತ ಗ್ರಂಥಗಳ ಮತ್ತು ಅಲಂಕಾರ ಗ್ರಂಥಗಳ ಕಾಲದಿಂದಲೇ ಇವರ ಕಾಲದ ಬಗ್ಗೆ ಸ್ಫೂಲ ವಾದ ಅನುಮಾನಗಳನ್ನು ಮಾಡಬಹುದು. ಬಿಡಿಪದ್ಯುಗಳನ್ನು ಬರೆದ ಮೂವತ್ತೆರಡು ಜನ ಕವಯಿತ್ರಿಯರಲ್ಲಿ ಚಂಡಾಲನವಿದೈ ಯೆಂಬವಳು ಎಲ್ಲಕ್ಕೂ ಪ್ರಾಚೀನಳೆಂದು ತೋರುವದು. ಸದುಕ್ತಿ ಕರ್ಣಾಮೃತದಲ್ಲಿ ಇವಳೂ, ವಿಕ್ರಮಾದಿತ್ಯನೂ, ಕಾಳಿದಾಸನೂ ಕೂಡಿ ಬರೆದ ಬೆಳದಿಂಗಳ ವರ್ಣನೆಯ ಒಂದು ಪದ್ಯವು ದೊರೆಯು ವದು. ಇದರಿಂದ ಇವಳು ಕಾಳಿದಾಸ ಮತ್ತು ವಿಕ್ರಮಾದಿತ್ಯರ ಸಮಕಾಲೀನಳೂ, ನಾಲ್ಕನೆಯ ಶತಮಾನದವಳೊ ಎಂದು ಕಂಡು ಬರುವದು. ಫಲ್ಲುಹೆಸ್ತಿನಿಯೆಂಬವಳೆ ಪದ್ಯವನ್ನು ೮ನೆಯ ಶತ ಮಾನದ ವಾಮನನು ತನ್ನ ಕಾನ್ಯಾಲಂಕಾರ ಸೂತ್ರದಲ್ಲಿ ಉಲ್ಲೇಖಿ ಸುವನು. ಆದುದರಿಂದ ಫಲ್ಗುಹೆಸ್ತಿನಿಯ ಕಾಲವು ೮ನೆಯ

ಸಂಸ್ಕೃತ ಕವಯಿತ್ರಿಯರು ಷಿ

ಶತಕಕ್ಕೆ ಮೊದಲಿನದೆಂದು ಹೇಳಬಹುದು. ಆನಂದವರ್ಧನನ ಧ್ವನ್ಯಾಲೋಕದಲ್ಲಿ ನಿಕಟನಿತಂಬೆಯ « ಲಾನಣ್ಯಸಿಂಧುರಪರೈವ ಹಿ ಕೇಯಮತ್ರ' ಎಂಬ ಪದ್ಯವು ಬಂದಿರುವದರಿಂದ ೯ನೆಯ ಶತಕವು ಅವಳೆ ಕಾಲದ ಈಜಿಯ ತುದಿಯೆಂದು ನಿರ್ಣಯಿಸ ಬಹುದು. ೧೦ನೆಯ ಶತಮಾನದ ರಾಜಶೇಖರನು ಶೀಲಾಭಟ್ಟಾರಿಕೆ ಯನ್ನು ಹೊಗಳುವರು. ಸೀತಾ ಎಂಬವಳೆ ಪದ್ಯವನ್ನು ಉಲ್ಲೇಖಿ ಸುವನು. ತ್ರಿಭುವನ ಸರಸ್ವತಿಯ ಹೆಸರನ್ನೂ ಉಲ್ಲೆ ೇಖಸುವನು. ಇದೇ ಕಾಲದ ಭೋಜನು ಸರಸ್ವತೀ ಕಂಠಾಭರಣದಲ್ಲಿ ಸರಸ್ವತಿ ಮತ್ತು ಚಿನ್ನಮ್ಮರ ಪದ್ಯಗಳನ್ನು ಉಲ್ಲೆ ೇಖಿಸುವನು. ಇದರಿಂದ ಇವರೆಲ್ಲರ ಕಾಲವು ೧೦ನೆಯ ಶತಕಕ್ಕೆ ಪೂರ್ವದ್ದಂದು ತಿಳಿದುಬರು ವದು. ಭಾವಸೇವಿಯ ಎರಡು ಪದ್ಯಗಳು ೧೧ನೆಯ ಶತಕದ ಕನೀಂದ್ರನಚನ ಸಮುಚ್ಚಯದಲ್ಲಿ ಬಂದಿವೆ. ಜಲ್ಹಣನ ಸೂಕ್ತಿ ಮುಕ್ತಾವಲಿಯಲ್ಲಿ ಮಾರುಲಾ ಮತ್ತು ಮೋರಿಕಾ ಇವರ ಪದ್ಯ ಗಳು ದೊರೆಯುತ್ತವೆ. ಜಲ್ಲ ಣನು ೧೩ನೆಯ ಶತಕದನನು. ಮದಾಲಸಾ, ನಾಗಮ್ಮಾ, ಸರಸ್ವತೀಕುಟುಂಬದುಹಿತಾ, ರಾಜ ಕನ್ಯಾ, ಲಕ್ಷ್ಮೀ ಇವರೆ ಪದ್ಯಗಳು ೧೪ನೆಯ ಶತಕದ ಶಾರ್ಜಧರ ಪದ್ಧತಿಯಲ್ಲಿ ದೊರೆಯುತ್ತವೆ. ಗೌರಿ, ಮಧುರವಾಣಿ, ಪದ್ಮಾನತೀ ಕೇರಲೀ, ವೇಣಿದತ್ತಾ ಇವರೆಲ್ಲ ೧೭ನೆಯ ಶತಮಾನದವರು. ಹೀಗೆ ೪ನೆಯ ಶತಕದಿಂದ ೧೭ನೆಯ ಶತಕದ ವರೆಗಿನ ಸುಮಾರು ೧೫೦೦ ವರ್ಷಗಳ ಕಾಲಾವಧಿಯಲ್ಲಿ ೩೨ ಜನ ಸಂಸ್ಕೃತ ಕವಯಿತ್ರಿ ಯರು ಆಗಿಹೋಗಿರುವರು.

ಇವರು ಭಾರತವರ್ಷದ ಯಾವ ಯಾನ ಭಾಗದಲ್ಲಿ ಜನ್ಮನೆತ್ತಿದ ರೆಂದು ಹೇಳೆಲು ಯಾವ ಸಾಧನಗಳೂ ಇಲ್ಲ. ಚಿನ್ನಮ್ಮ, ನಾಗಮ್ಮ, ಕೇರಲೀ ಮೊದಲಾದವರ ಹೆಸರುಗಳು ಮಾತ್ರ ಅವರು ದಕ್ಷಿಣ

ಸಂಸ್ಕೃತ ಕವಯಿತ್ರಿಯರು

ಭಾರತದವರೆಂದು ಸೂಚಿಸುತ್ತವೆ. ಇವರೆ ಜೀವನಚರಿತೆಯೆ ವಿಷಯ ದಲ್ಲಿ ಯಾವ ವಿವರಗಳೂ ತಿಳಿಮಬದುವದಿಲ್ಲ.

ಕವಯಿತ್ರಿಯರೆ ಉಪಲಬ್ಧವಿದ್ದ ಕೆಲವೇ ಬಿಡಿ ಪದ್ಯಗಳಿಂದ ಇವರ ಕಾವ್ಕಪ ಜನೆ ol ತಿಳಿದುಕೊಳ್ಳಬಹೆದು. ಬಿ (ಪುರುಷರ ಸೌಂದರ್ಯ

ಸೆರ್ಗವರ್ಲೆನೆ, ಜಖುತು ಗಳು, ಸೂರ್ಯೋದಯ, ಸಂಜೆ rnd ದೈವ, ಧರ್ಮ ಹೀಗೆ ಸಪೈ ದಯರಿಗೂ ಕನಿಗಳಿಗೂ ಪ್ರಿಯವಾದ ಅನೇಕ. ಬಷೆಯಗಳನ್ನು ಪದ್ಯಗಳನ್ನು ಬರೆದಿದ್ದಾರೆ. ವಿಷಯಗಳ ಆಯ್ಕೆಯು

Mi ಕಂಡರೂ ನಿರೂಪಣೆಯಲ್ಲಿ ನಾವೀನ್ಯನಿದೆ. ಹೆಣು ಸಹೃದಯದ ವ್ಯ ವೈಶಿಷ್ಟ ವು ಒಡೆದು ಕಾಣುತ್ತದೆ. ಮಾನವ ಸ್ವಭಾವ ಉ್ಭವ ವಲ್ಲಿ ಹೆಣ ಣ್ಣು ಮಕ್ಕುಳಿಗಿರುವ ಸೂಕ್ಷ್ಮ ದೃಷ್ಟಿ, ಯು ರ್ಲಿಸುವಾಗೆ ವ್ಯಕ್ತವಾಗುವ ಭಾವನೆಗಳ

ದಲ್ಲಿ ಮೂಡಿಬರುವ ಆಶೆ, ವಿರಹ

ನಿನೆ ನೇದನೆಯಲ್ಲಿಯ ವೇದಕ್ಕೆ ಅಸತೀಚರಿತ ಕಥನದಲ್ಲಿ ಕಾಣುವ i ಓದುಗರ ಮನಸ್ಸನ್ನು ಸೆರೆ ಹಿಡಿಯುತ್ತವೆ. ಪುರುಷರು ಸ್ತ್ರೀಯರ ಸೌಂದರ್ಯವನ್ನು ವರ್ಣಿಸುವ ಸಂದರ್ಭಗಳು ಸಂಸ್ಕತ ಸಾಹಿತ್ಯದಲ್ಲಿ ವಿಪುಲವಾಗಿವೆ. ಆದರೆ ಸ್ತ್ರೀಯರು ಪುರುಷರ ಸೌಂದರ್ಯವ ನು ವರ್ಣಿಸುವ ಒಂದೆರಡೇ ಸಂದರ್ಭಗಳು ತುಂಬ ಸರಸವಾಗಿವೆ. ದೇವತಾಸ್ತುಕಿಯಲ್ಲಿ ಕಂಡುಬರುವ ಗಾಂಭೀರ್ಯವೂ ದೈವ ಧರ್ಮಗಳಲ್ಲಿಯ ಶ್ರದ್ಧೆಯೂ ಭಾರತೀಯ ಮಹಿಳೆಯರ ಪರಂಪ ರೆಗೆ ಒಪ್ಪುನಂತಹೆವಾಗಿನೆ. ಹೀಗೆ ಕೆಲವೇ ಪದ್ಯಗಳಲ್ಲಿಯೇ ತಮ್ಮ ಬಹೆಮುಖವಾದ ಪ್ರತಿಭೆಯನ್ನು ಬಿಟ್ಟುಹೋಗಿರುವ ನನ್ಮು ಕನಯೆತ್ರಿಯರ ಕೃ ಕೃತಿಗಳಲ್ಲಿಯ ಕೆಲವನ್ನು ನಾವು ಸ್ಟ

NM

29 (2°

C 3 RK; CL (3 2 ಣಿ ©

ಸಂಸ್ಕೃತ ಕನಯಿತ್ರಿಯರು

ಪದ್ಮಾನತಿ ಎಂಬ ಕವಯಿತ್ರಿಯು ಸೂರ್ಯೋದಯವನ್ನು ಹೀಗೆ ವಠ್ಚಿಸುವಳು :

ಪ್ರಭಾತವೇಲಾ ಸ್ಮರರಾಜಪ್ರತ್ರ್ರೀ |

ನೀರಾಜನಾ ಭಾಜನ ನಂರ್ಕಬಿಂಬಮ್‌

ಆಯಾತಿ ನೀರಾಜಿತುಮಬ್ಬಿ ಪುತ್ರೀಮ್‌ |

ಪಾಣೌ ಗೃಹಿತ್ವಾಂಕುರಿತಾಂಶುಮೂಲವಮಂ್‌ |

ಪ್ರಭಾತ ವೇಳೆಯೆಂಬ ರಾಜಕನ್ನಿಕೆಯು ಎಳಕಿರಣಗಳಿಂದ ತುಂಬಿದ ಸೊರ್ಯಬಿಂಬನೆಂಬ ನೀಲಾಂಜನವನ್ನು ಹಿಡಿದುಕೊಂಡು ಸಮುದ್ರ ಕನ್ನಿಕೆಗೆ ಆರತಿ ಬೆಳಗಲು ಬರುತ್ತಿರುವಳು ”, ಸೂರ್ಯೋ ದಯದ ರೂಪಕವು ಸ್ತ್ರೀಹೃದೆಯದ ಒಲವನ್ನು ಎತ್ತಿ ತೋರಿ ಸುತ್ತದೆ.

ಇಂದುಲೇಖೆಯೆಂಬ ಕನಯಿತ್ರಿಯು ಸೂರ್ಯನು ಎಲ್ಲಿ ಮುಳುಗು ವನು ಎಂಬ ಪ್ರತ್ನೆಗೆ ಹೀಗೆ ಉತ್ತರ ಕೊಡುವಳು : ಏಕೇ ವಾರಿನಿಧಾ ಪ್ರವೇಶಮಪರೇ ಲೋಕಾಂತರಾಲೋಕನಮ್‌ | ಕೇಚಿತ್‌ ಪಾವಕಯೋಗಿತಾಮ್‌ ನಿಜಗದುಃ ಕ್ಷೀಣೇನ್ಷಿ ಚಂಡಾರ್ಚಿಷಃ ಮಿಥ್ಯಾ ಚೈ ತದಸಾಕ್ಷಿಕಮ್‌ ಪ್ರಿಯಸಖಿ ಪ್ರತ ಕ್ಷತೀವ್ರಾತಸಮ್‌ | ಮನ್ಯೇಹವರ್‌ ಪುನರಧ್ವನೀನರಮಣೀಚೇತೋಧಿಶೇತೇ ರವಿಃ

ಕೆಲವರು ಸೂರ್ಯನು ಸಮುದ್ರವನ್ನು ಪ್ರವೇಶಿಸುವನು ಎಂದು ಹೇಳುವರು. ಮತ್ತೆ ಕೆಲವರು ಇನ್ನೊಂದು ಜಗತ್ತನ್ನು ಬೆಳೆಗಲು ಹೋಗುವನು ಎನ್ನುವರು. ಹಗಲು ಕಳೆದಾಗ ಚಂಡಕಿರಣನು ಅಗ್ನಿಯಲ್ಲಿ ಸೇರಿಕೊಳ್ಳುವನೆಂದು ಬೇರೆ ಕೆಲನರು ಹೇಳುವರು. ಇದೆಲ್ಲವೂ ಸುಳ್ಳು ಇದೆಲ್ಲವನ್ನು ಯಾರೂ ಕಂಡಿಲ್ಲ. ಯಾರ ಪತಿಯು ಪ್ರವಾಸಕ್ಕೆ ತೆರಳಿರುವನೋ ಅಂಥ ಸತಿಯರೆ ಹೈದಯ ವನ್ನು ಅವನು ಸೇರಿರುವನೆಂದು ನನ್ನ ಅಭಿಪ್ರಾಯ. ಅಲ್ಲಿ ತಾಪವು

& ಸಂಸ್ಕೃತ ಕವಯಿತ್ರಿಯರು

ಪ್ರತ್ಯಕ್ಷವೂ ತೀವ್ರವೂ ಆಗಿರುವದು. ಹೆಣ್ಣುಹೃದಯದ ವೇದನೆ ಯನ್ನು ಹೆಣ್ಣು ಹೈದಯವೇ ಚನ್ನಾಗಿ ಚಿತ್ರಿಸಬಲ್ಲದು. ವಿರಹೆ ವೇದನೆಯನ್ನು ಇದಕ್ಕೂ ಚನ್ನಾಗಿ ಚಿತ್ರಿಸಬಹುದೇ?

ಚಂಡಾಲ ವಿದ್ಯೆಯೆಂಬ ಇನ್ನೋರ್ವ ಕನಯಿತ್ರಿಯು ಹಾಲು ಜೆಲ್ಲಿದಂತೆ ಬಿದ್ದ ಬೆಳದಿಂಗಳನ್ನು ಕಂಡು ಹೆಗಲಿನ ಕಾರ್ಯ ಗಳಿಂದ ದಣಿದ ಜಗತ್ತು ಕ್ಷೀರಸಾಗರದಲ್ಲಿ ಮುಳುಗಿದೆ ಎಂದು ಉತ್ಪ್ರೇಕ್ಷಿಸುವಳು.

ಸಂಸ್ಕತ ಕನಯಿತ್ರಿಯರ ಉಪಲಬ್ಬವಿದ್ದ ಪದ್ಯಗಳಲ್ಲಿ ಬಹು ಸಂಖ್ಯ ಪದ್ಯಗಳು ಶೃಂಗಾರದ ಪದ್ಯಗಳು. ಶೃಂಗಾರದ ವಿವಿಧ ಅಂಗಗಳಾದ ದರ್ಶನ, ಪ್ರೇಮಾಂಕುರ, ವಿರಹೆ, ಮಾನ, ಕಲಹ ಮೊದಲಾದವು ಸೊಗಸಾಗಿ ಚಿತ್ರಿತವಾಗಿವೆ.

ಭಾವದೇವಿ ಎಂಬ ಕವಯಿತ್ರಿಯು ಪತಿಯ ಪ್ರೇಮದ ರುರಿಯು ಕುಂಠಿತವಾಗುತ್ತ ನಡೆದ ಓರ್ರೆ ಮಾನಿನಿಯ ಉದ್ವೇಗವನ್ನು ಸೊಗ ಸಾಗಿ ವರ್ಣಿಸಿದ್ದಾಳೆ. ತಥಾಭೂದಸ್ಮಾಕಮ್‌ ಪ್ರಥಮನುವಿಭಿನ್ನಾ ತನುರಿಯೆವರ್‌ | ತತೋನು ತ್ವವರ್‌ ಪ್ರೇಯಾನಹವಂಪಿ ಹತಾಶಾ ಪ್ರಿಯತಮಾ ಇದಾನೀವರ್‌ ನಾಥಸ್ತ್ಯವರ್‌ ವಯಮಪಿ ಕಲತ್ರಮ್‌ ಕಿಮಪರಮ್‌ | ಮಯಾಪ್ತ ಮ್‌ ಪ್ರಾಣಾನಾವರ್‌ ಕುಲಿಶ ಕಠಿನಾನಾಮ' ಫಲಮಿದವ್‌॥

. ಮೊದಲು ನಮ್ಮಿಬ್ಬರ ದೇಹವು ಒಂದೇ ಆಗಿತ್ತು. ಬಳಿಕ ನೀನು ಪ್ರಿಯೆಕರನಾದಿ, ದುರ್ದೈನಿಯಾದ ನಾನು ನ್ರಿಯತಮೆಯಾದೆ. ಈಗ ನೀನು ನಾಥನು ನಾನು ಹೆಂಡತಿ ಹೆಚ್ಚೇನು ವಜ್ರಕ್ಕಿಂತ ಕಠಿಣವಾದ ಪ್ರಾಣಗಳೆ ಫಲವು ನನಗೆ ದೊರೆತಂತಾಯಿತು. ಪರಸ್ಪರರನ್ನು ಒಂದುಗೂಡಿಸಿದ ಪ್ರೇಮವು ಕ್ರಮೇಣ ಶಿಥಿಲ ವಾಗುತ್ತ ನಡೆದು ಕೇವಲ ಪತಿ-ಪತ್ನಿ ಭಾವ ಸಂಬಂಧವುಳಿದ

ಸಂಸ್ಕೃತ ಕವಯಿತ್ರಿ ಯಂರಂ &

ಚಿತ್ರವು ಹೆಣ್ಣುಹೈದಯದ ಕಹಿ ಅನುಭವದ ಸುಂದರ ನಿರೂ ಪಣೆಯಾಗಿದೆ. ಬಿಲ್ಲ ಣನೂ ರಾಜಕನೈಯೂ ಕೂಡಿ ಬರೆದ ಇನ್ನೊಂದು ಪದ್ಯ ದಲ್ಲಿ ಪರಸ್ಪರರ ಹೃದಯವು ಒಂದಾದ, ಆದರೆ ದರ್ಶನ ಸಮಾಗಮ ಗಳಿನ್ನೂ ಒದಗಿ ಬರದ ಪ್ರೇಮಿಗಳೆ ಕೊರಗು ಸೊಗಸಾಗಿ ಚಿತ್ರಿತವಾಗಿದೆ. ನಿರರ್ಥಕಮ್‌ ಜನ್ಮ ಗತಮ್‌ ನಲಿನ್ಯಾ | ಯಯಾನ ದೃಸ್ಟ್ರವತ” ತುಹಿನಾಂಶುಬಿಂಬವು” ಚಂದ್ರ ಬಿಂಬವನ್ನು ನೋಡದ ನಲಿನಿಯ ಜನ್ಮ ವ್ಯರ್ಥ ಎಂದು ರಾಜಕನ್ಯೆ ತನ್ನ ಹೃದಯವನ್ನು ತೋಡಿಕೊಂಡರೆ, ಉತ್ಪತ್ತಿರಿಂದೋರಪಿ ನಿಷ್ಪಲೈವ | ಕೃತಾ ಏನಿದ್ರಾ ನಲಿನೀ ಯೇನ ನಲಿನಿಯನ್ನು ಅರಳಿಸದ ಚಂದ್ರನ ಉದಯವೂ ನಿರರ್ಥಕ ವೆಂದು ಬಿಲ್ಪಣನು ತನ್ನ ನಿರಾಶೆಯನ್ನು ವೃಕ್ತಪಡಿಸುವನು. ಅನುರೂಪಿಗಳಾದ ಸ್ತ್ರೀಪುರುಷರು ಪರಸ್ಪರ ಪ್ರೇಮಭಾವ ತಾಳ ದಿದ್ದು ದನ್ನು ಕಂಡು ಲಕಿ ಕ್ಲಿಟಿಯೆಂಬ ಕನಯಿತ್ರಿಯು ಪರಸ್ಪರಾ ಕರ್ಷಣೆಗೆ ಅಜ್ಜಾ ತವಾದ ಈಶ ರೇಚ್ಛೆ ಯೇ NR ಹೊರತು ಕೇವಲ. ಅನುರೂಪ ರೊಪ ಯೌವನಗಳಲ್ಲವೆಯ ಪ್ರೇಮ ಸಿದ್ಧಾಂತವನ್ನು ಮಾರ್ಮಿಕವಾಗಿ ಪ್ರತಿಪಾದಿಸಿದ್ದಾಳೆ. ಭ್ರಮನ್‌ ವನಾಂತೇ ನವಮುಂಜರೀಸು | ಷಟ್ಟದೋ ಗಂಧಫಲೀವೂಜಿಪುತ್‌ ಸಾಕಿವ್ತ್‌ ರಮ್ಯಾ ಸಚಕಿಮ್‌ ರಂತಾ | ಬಲೀಯಸೀ ಕೇವಲಮೀಶ್ವರೇಚ್ಛಾ

ಅಡನಿಯಲ್ಲಿ ನೆವಮಂಜರಿಗಳನ್ನು ಅರಸುತ್ತ ತಿರುಗುವ

ಸಂಸ್ಕೃತ ಕವಯಿಶ್ರಿಯರು

ಭ್ರಮರವು ಸಂಪಿಗೆಯನ್ನು ಮೂಸಲಿಲ್ಲ ಸಂಪಿಗೆ ಸುಂದರವಲ್ಲವೆ ? ಭ್ರಮರವು ರಸಿಕನಲ್ಲವೇ? ಆದರೆ ಈಶ್ವರೇಜ್ಛೆಯು ಬಲವತ್ತರ ವಾಗಿದೆ. ಪದ್ಯವು ಕಾಲಿದಾಸನ “4 ನಾಸೌ ಕಾಮ್ಯಾ ನಚ ನೇದ ಸಮ್ಯಗ್‌ ದ್ರಷ್ಟುನರ್‌ ಸಾ ಭಿನ್ನ ರಂಚಿರ್ಹಿ ಲೋಕಃ?

ಎಂಬ ಮಾತನ್ನು ನೆನಸಿಗೆ ತರುತ್ತದೆ. ಸರಿಣತಮತಿ ಕಾಲಿದಾಸನು ಜನರ ಅಭಿರುಚಿಯು ಭಿನ್ನ ವಾಗಿರುತ್ತದೆ ಎಂದು ಹೇಳಿದರೆ ನಮ್ಮ ಕವಯಿತ್ರಿಯು ತಪ್ಪನ್ನು ಈಶ್ವರನ ತಲೆಗೆ ಕಟ್ಟುತ್ತಾಳೆ.

ಅಭಿಜಾತ ಫೆ ಪ್ರೇಮವನ್ನು ಕುರಿತು ಹಾಡುವ ಸಂಸ್ಕೃ ತೆ ಕವಿಗಳು ಆಗಾಗ ಪ್ರೇಮದ ವ್ಯವಹಾರಗಳನ್ನು 6 ಚಿತ್ರಿ ಸುವರು.. ಆಸತಿಯರ ವರ್ತನೆಯನ್ನು ಹೆಣ್ಣುಮಕ್ಕಳೇ ಹೀಗೆ ಚಿತ್ರಿಸುವರೆಂದು ತಿಳಿದುಕೊಳ್ಳು ವದರಲ್ಲಿ ಕುತೂಹಲವಿರುವದು ಸಹಜ, ಅಸತಿಯರ ನರ್ತನೆಯನ್ನು ರೂರ ವರ್ಲಿ ಸುವ ಕನಿಗಳಾಗಲೀ ಕವಯಿತಿ ತ್ರಿಯರಾಗಲೀ ಅದಕ್ಕೆ ತಮ್ಮ ಕೈತಿಕ ಬೆಂಬಲವನ್ನು ube ಎಂದು ಅರ್ಥವಲ್ಲ. ಅನ ವರ್ತನೆಯ ಎಲ್ಲಬದಿಗಳನ್ನು ಚಿತ್ರಿಸಲು ಹೊರಟ ಅವರು ಇದನ್ನೂ ಚಿತ್ರಿಸುವರು. ಅದರ ಗುಣದೋಷಗಳನ್ನು ಅರಿತುಕೊಂಡು ವರ್ತಿಸುವ ಹೊಣೆ ಸಹೃದಯ ವಾಚಕರನ್ನು ಕೂಡಿದೆ. ಕವಯಿತ್ರಿ ಯರ ಕಲ್ಪನಾ ಚಾತುರ್ಯವನ್ನು ನೋಡುವ ದೃಷ್ಟಿಯಿಂದ ಇಲ್ಲಿ ಅಸತೀ ಚರಿತೆಯ ಕೆಳೆಗಿನ ಪದ್ಯವನ್ನು ನೋಡಬಹುದು. ಆಕಾರೇಣ ಶಶೀ ಗಿರಾ ಪರಭೃತಃ ಪಾರಾವಶಶ್ಚುಂಬನೇ |

ಹಂಸಶ್ಚಂಕ್ರವ:ಣೇ ಸಮವಂ್‌ ಜಯೊತಯಾ ರತ್ಯಾಮಂ” ವಿಮರ್ದೇೇ ಗಜಃ

ಣೆ ಸಂಸ್ಕೃ ತ್ರ ಕವಯಿತ್ರಿಯರು

ಇತ್ನಮರ್‌ ಭರ್ತರಿ ಮೇ ಸಮಸ್ತ ಯುವತಿಶ್ಲಾಘ್ಯೈರ್ಗುಣೈಃ ಕಿಂಚನ |

ನ್ನೂನಮ್‌ ನಾಸ್ತಿ ಪರಮ್‌ ವಿವಾಹಿತಣತಿ ಸ್ನಾನೆ. ದೋಸಷೋ- ; ಯದಿ |

ನನ್ನ ಪತಿಯು ನೋಡಲು ಚಂದ್ರ, ಮಾತಿನಲ್ಲಿ ಕೋಗಿಲೆ, ಚುಂಬಿಸಲು ಪಾರಿವಾಳ, ನಡಿಗೆಯಲ್ಲಿ ಹಂಸ್ಕ ರತಿಯಲ್ಲಿ ಆನೆ ಬಗೆ ಯುವತಿಯರಿಗೆ ಶ್ಲಾಘ್ಯವಾದ ಎಲ್ಲ ಗುಣಗಳು ಇರುವವು. ವಿವಾಹಿತನಾದ ಪತಿ ಎಂಬುದೇ ಒಂದು ನ್ಯೂನತೆ.”

ಒಂದು ರೀತಿಯಿಂದ ಇದು ಕುಲಟೆಯರ ನಿಂದೆಯೇ ಆಗಿದೆ ವೈವಾಹಿಕ ಜೀವನವು ಹೊರಿಸುವ ಹೊಣೆ ಮತ್ತು ಗಾಂಭೀರ್ಯ ಆವರಿಗೆ ಬೇಡವಾದ ವಿಷಯ. ವೈವಾಹಿಕ ಜೀವನದ ಚೌಕಟ್ಟಿನಲ್ಲಿ ಎಂಥ ಸುಂದರ ಸತಿಯಿದ್ದರೂ ಅವರಿಗೆ ಸುಖವಿಲ್ಲ. ಇಂಥ ವಿಪರ್ಯಸ್ತ ಮನೋವೃತ್ತಿಯ ಶುಲಟಿಯರ ಜೀವನದ ಅಂದಗೇಡಿ ತನವನ್ನು ಎತ್ತಿ ತೋರಿಸುವದೇ ಕವಯಿತ್ರಿ ಮಧುರವರ್ಣಿಯ ಉದ್ದೇಶವಾಗಿರಬೇಕು.

ನಿಸರ್ಗವರ್ಣನೆ ಮತ್ತು ಮಾತ್ರವಲ್ಲದೇ ಮಾನವ ಸ್ವಭಾ ಭವವನ್ನು ನಿರೂಪಿಸುವದ ಕೌಶಲ್ಯವನ್ನು ತೋರಿಸಿದ್ದಾರೆ.

ಸ್ವಭಾವಸಿದ್ಧ ಮ್‌ ವಕ್ರತ್ವವರ್‌ ಖಲಸ್ಕ ಹಲಸ್ಕ |

ಮುಖಾಕ್ಷೇಪಮ್‌ ತಯೋಃ ಸೋಢುನುಲಮೇಕೈನ ಸಾ ಕ್ಷಮಾ " ದುರ್ಜನರ ಸ್ವಭಾವವೂ ನೇಗಿಲವೂ ವಕ್ರವಾಗಿರುವದು ಸಹಜ ಸಿದ್ಧ - ನೇಗಿಲದ ತುದಿ ಕೊರೆಯುವದನ್ನು ಕ್ಷಮೆ ( ನೆಲ) ಯೇ ಪಡೆದುಕೊಳ್ಳಬಲ್ಲದು. ದುರ್ಜನರ ಬಿರುಸು ಬಾಯನ್ನು ಕ್ಚಮಾ ಗುಣವೇ ತಡೆದುಕೊಳ್ಳೆಬಲ್ಲದು” ಎಂದು ಪದ್ಮಾನತಿಯು

೧೬ 30೧% ಛು ಲ್ಕ 2 3 (6 31 GL ಕಿ ಫ್‌”

೧೦ ಸಂಸ್ಕೃತ ಕನಯಿತ್ರಿಯರಂ

ಹೇಳುವಳು. ಇಲ್ಲಿ ಕವಯಿತ್ರಿಯ ಅನುಭವವೂ, ನಿರೂಪಣೆಯ ಜಾಣ್ಮೆಯೂ ಒಡೆದು ಕಾಣುತ್ತವೆ. ಶೀಲಾ ಭಟ್ಟಾರಿಕೆಯು ಕೃತಪ್ಪನನ್ನು ಜನರು ನಂಬುವದಿಲ್ಲ ವೆಂಬುದನ್ನು ಕಾವ್ಯಮಯವಾಗಿ ಹೀಗೆ ಹೇಳುತ್ತಾಳೆ : ಟ್ರಯಾ ವಿರಹಿತಸ್ಕಾಸ್ಕ ಹೃದಿ ಚಿಂತಾ ಸಮಾಗತಾ | ಇತಿ ಮತ್ವಾ ಗತಾ ನಿದ್ರಾ ಕೇ ಕೃತಪ್ನುಮುಪಾಸತೇ | ಪ್ರಿಯೆ ಅಗಲಿದೊಡನೆ ಇನನ ಹೃದಯದಲ್ಲಿ ಚಿಂತೆ ಬಂದು ಸೇರಿದಳು ಎಂದು ನಿದ್ರೆ ಹೊರಟುಹೋದಳು. ಕೃತಫೈ ನನ್ನು ಯಾರು ನಂಬುವರು. ? ಮದಾಲಸೆ ಎಂಬ ಕನಯಿತ್ರಿಯು ನಮಗೆ ಪರದೃಷ್ಟಿಯುಳ್ಳಿವ ರಾಗಿರೆಂದು ತುಸು ಉಪದೇಶ ಮಾಡಿದ್ದಾಳೆ. ಪರಲೋಕಹಿತನರ್‌ ತಾತ ಪ್ರಾತರುತ್ಥಾಯಂ ಚಿಂತಯ | ಇಹ ತೇ ಕರ್ಮಣಾಮೇವ ವಿಪಾಕಶ್ಚಿಂತಯಿಷ್ಕತಿ I Ej ನಿನ್ನ ಇಲ್ಲಿಯ ಚೆಂತೆಯನ್ನು ನಿನ್ನ ಹಿಂದಿನ ಕರ್ಮಫಲವೇ ಮಾಡುವದು. ಪ್ರಾತಃಕಾಲದಲ್ಲಿ ತುಸು ಮುಂದಿನ ಚಿಂತೆಯನ್ನು ಮಾಡು.” ಕನಯಿತ್ರಿಯ ಹೆಸರು ಆಲಸೆಯಾದರೂ ಅವಳು ನಮ್ಮನ್ನು ಬಹುದೂರದ ವಿಚಾರ ಮಾಡಲು ಹೆಚ್ಚಿದ್ದಾಳೆ. ಬಿಡಿ ಪದ್ಯಗಳನ್ನು ಬರೆದ ಸಂಸ್ಕೃತ ಕನಯಿತ್ರಿಯರ ಕೃತಿಗಳ ವಿಮರ್ಶೆಯನ್ನು ವಿದ್ಯಾವತಿಯ ಗೌರೀ ಸ್ತುತಿಯ ಕೆಳಗಿನ ಪದ್ಯದಿಂದ ಮಂಗಲ ಮಾಡಬಹುದು. ಯಸ್ಕಾಃ ಪ್ರೀತೃರ್ಥ ಮನಿಶಮ್‌ ಲಾಸ್ಕವರ್‌ ಕುರ್ವನ್‌ಶಿವೋ ಬಭೌ | ನಮಸ್ತಸ್ಮ್ಮೈ ಸುಮೀನಾಶಕ್ರ್ಯೈ ದೇವ್ಕೈ ಮಂಗಲಮೂರ್ತಯೇ ಯಾರ ಪ್ರೀತಿಗಾಗಿ ಶಿವನು ಯಾವಾಗಲೂ ನೃತ್ಯಮಾಡುತ್ತ ಶೋಭಿಸಿದನೋ ಮಂಗಲಮೂರ್ತಿ ಮೀನಾಕ್ಷಿಗೆ ನಮಸ್ಕಾರವ್ಯ

ರಸಾ ಕ್ರಾಷ್‌

ವಿಜಯಾಂಬಿಳೆ

ಮೂವತ್ತೆರಡು ಜನ ಬಿಡಿ ಪದ್ಯಗಳನ್ನು ಬರೆದ ಕನಯಿತ್ರಿಯ ರಲ್ಲದೆ ನಾಲ್ವರು ಪೂರ್ಲಕೃತಿಗಳನ್ನು ಬರೆದ ಕವಯಿತ್ರಿಯರಿರುವರು. ಇವರಲ್ಲಿ « ಕೌಮುದೀ ಮಹೋತ್ಸವ? ಎಂಬ ನಾಟಕವನ್ನು ಬರೆದ ವಿಜ್ಜಿಕೆ ಅಥವಾ ವಿಜಯಾಂಬಿಕೆಯು ಪ್ರಾಚೇನಳೆಂದು ತೋರು ವದು. ವಿಜ್ಞಕೆಯ ಕಾಲ್ಕ ದೇಶ್ಯ ವ್ಯಕ್ತಿತ್ವದ ವಿಷಯ ವಾಗಿಯೂ ಕೌಮುದೀಮಹೋತ್ಸವ ನಾಟಕದ ವಿಷಯವಾಗಿಯೂ ವಿದ್ವಾಂಸರು ಭಿನ್ನ ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರು ನರು. ಇವುಗಳಲ್ಲಿ ಇಂಥ ಅಭಿಪ್ರಾಯವು ಹೆಚ್ಚು ಸಮರ್ಪಕ ವೆಂದು ಹೇಳಬಹುದಾದಂಥ ಬಲವತ್ತರವಾದ ಪ್ರಮಾಣವು ವರೆಗೆ ಮುಂದೆ ಬಂದಿಲ್ಲವಾದ್ದರಿಂದ ನಿರ್ಣಯವನ್ನು ಮುಂದಿನ ಸಂಶೋಧನೆಗೆ ಬಿಟ್ಟುಕೂಡಬೇಕಾಗಿದೆ. ಸರಸ್ವತೀವ ಕರ್ಣಾಹೀ ವಿಜಯಾಂಕಾ ಜಯತ್ಕ್ಯಸೌ ಯಾ ವೈದರ್ಭಗಿರಾಮ್‌ ವಾಸಃ ಕಾಲಿದಾಸಾದನಂತರಮ್‌ 1 ಕಾಲಿದಾಸನ ನಂತರೆ ವೈದರ್ಭೀ ರೀತಿಯಲ್ಲಿ ಬರೆಯುವ ಜಯಾಂಬಿಕೆಯು ಸರಸ್ವತಿಯಂತೆ ವಿರಾಜಿಸುವಳು ಎಂದು ೧೦ನೆಯೆ ಶತಕದ ರಾಜಶೇಖರನು ಇವಳನ್ನು ಹೊಗಳುವನು. ಇದರಿಂದ ಇವಳು ಕರ್ಣಾಟಕ ದೇಶದವಳೊ ರಾಜಶೇಖರನಿಗಿಂತ ಪ್ರಾಚೀನಳೂ ವೈದರ್ಭೀ ರೀತಿಯಲ್ಲಿ ಬರೆಯುವದರಲ್ಲಿ ನಿಪುಣಳೂ ಎಂದು ತಿಳಿದುಬರುತ್ತದೆ.

ನೀಲೋತ್ಸಲದಲಶ್ಯಾಮಾಮ್‌ ನಿಜ್ಜೆ ಕಾಮ್‌ ಮಾಮಜಾನತಾ | ವೃಥ್ಸೈೆವ ದಂಡಿನಾ ಪ್ರೋಕ್ತಾ ಸರ್ವ ಶುಕ್ಲಾ ಸರಸ್ವತೀ

೧೨ ಸಂಸ್ಕೃತ ಕವಯಿತ್ರಿಯರು

ನೀಲಕಮಲದ ದಳೆಗಳೆಂತೆ ಕಪ್ಪಾಗಿರುವ ನಿಜ್ಜಿಕೆಯನ್ನರಿ ಯದೆ ದಂಡಿಯು ಸರಸ್ವತಿ ಬೆಳ್ಳಗಿರುವಳೆಂದು ಹೇಳಿರುವನು” ಎಂಬ ಒಂದು ಪದ್ಯವು ವಿಜ್ಞಿಕೆಯು ಬರೆದ ಪದ್ಯವೆಂದು ಪ್ರಸಿದ್ಧ ವಿದೆ. ರಾಜಶೇಖರನ ಪದೃದಲ್ಲಿಯೂ ಪದ್ಯದಲ್ಲಿಯೂ

ಜಯಾಂಬಿಕೆ ಹಾಗೂ ವಿಜ್ಞಿಕೆಯರನ್ನು ಸರಸ್ವತಿಗೆ ಹೋಲಿಸಿರು ವದನ್ನು ನೋಡಿದರೆ ಅವೆರಡೂ ಒಬ್ಬಳೇ ಕವಯಿತ್ರಿಯ ಹೆಸರಿರ ಬೇಕೆಂದು ಸ್ಪಷ್ಟವಾಗುವದು. ಅಲ್ಲದೇ ಕವಯಿತ್ರಿಯು ದಂಡಿಯ ಸಮಕಾಲೀನಳಾಗಲೀ ತುಸು ಈಚಿನವಳಾಗಲೀ ಇರ ಬೇಕೆಂಬ ಊಹೆಗೂ ಅನಕಾಶವಾಗುವದು. ದಂಡಿಯ ಕಾಲ ೭ನೆಯ ಶತಮಾನ.

ಏಕೋಭೂತ್‌ ನಲಿನಾತ್‌ ತತಶ್ಚ ಪುಲಿನಾತ್‌ ವಲ್ಮೀಕತಶ್ಚಾಸರಃ | ತೇ ಸರ್ವೇ ಕವಯಃ ಪ್ರಸನ್ನಮತಯಃ ತೇಭ್ಕೋ ಮಹದ್ಭ್ಯೋನವಂ॥॥ ಅರ್ವಾಂಚೋ ಯಂದಿ ಗದ್ಯಪದ್ಯರಚನಾ ಚಾತುರ್ಯಮಾತನ್ವತೇ | ತೇಷಾಮ್‌ ಮೂರ್ಧ್ಸಿ ದದಾಮಿ ವಾನುಚರೆಣವರ್‌ ಕರ್ಣೂಟಿ ರಾಜಪ್ರಿಯಾ

ಕಮಲದಿಂದ ಹುಟ್ಟಿದ ಬ್ರಹ್ಮ, ನದಿಯ ದಂಡೆಯ ಮರಳಿ ನಲ್ಲಿ ಹುಟ್ಟಿದ ನ್ಯಾಸ, ಹುತ್ತಿನಿಂದ ಹುಟ್ಟಿದ ವಾಲ್ಮೀಕಿ ಮೂವರು ಪ್ರಸನ್ನಮತಿಗಳಾದ ಕವಿಗಳು. ಮಹೆನೀಯರಿಗೆ ನಮಸ್ಸಾರ. ಆದರೆ ಈಗಿನವರು ಯಾರಾದರೂ ಗದ್ಯುಪದ್ಯವನ್ನು ರಚಿಸುವ ಚಾತುರ್ಯವನ್ನು ತೋರಿಸಹೋದಕೆ ಕರ್ಣಾಟರಾಜ ಪ್ರಿಯೆಯಾದ ನಾನು ಅವರ ತಲೆಯ ಮೇಲೆ ನನ್ನ ಎಡಗಾಲನ್ನು ಇಡುವೆನು. ಎಂಬ ಒಂದು ಪದ್ಯವು ಪ್ರಚಲಿತವಿದೆ. ಇದು ನಿಂದೆ ಯಂತೆ ಕಂಡರೂ. ಅನ್ವಯಭೇದದಿಂದ ವರ್ಣನೆಯೂ ಆಗಿದೆ.

ಸಂಸ್ಕೃತ ಕವಯಿತ್ರಿಯರು ೧೩೩

. ತೇಷಾಮ್‌ ಮೂರ್ಥ್ಮಿ' ಎಂದು ಅನ್ವಯ ಹೊಂದಿಸುವದರ ಬದಲು « ತೇಷಾಮ್‌ ವಾಮ-ಚರಣಮ್‌ ' ಎಂದು ಹೊಂದಿಸಿದಕೆ ಈಗಿನವರು ಯಾರಾದರೂ ಗದ್ಯುಪದ್ಯವನ್ನು ರಚಿಸುವ ಚಾತುರ್ಯ ವನ್ನು ತೋರಿಸಿದರೆ ಅವರ ಎಡಗಾಲನ್ನು ಕರ್ಣಾಟಕ ರಾಜಪ್ರಿಯೆ ನಾನು ತಲೆಯ ಮೇಲಿಟ್ಟುಕೊಳ್ಳುವೆನೆಂದರ್ಥವಾಗುವದು. ಇಲ್ಲಿ ವ್ಯಂಗ್ಯವಾಗಿ ಸ್ತುತಿಸಲ್ಪಟ್ಟಿ ಕನಿಯು ದಂಡಿಯೇ ಆಗಿರಬೇಕು. ಗದ್ಯ ಮತ್ತು ಪದ್ಯಗಳನ್ನು ಬರೆದವನು ದಂಡಿಯೇ ಅಲ್ಲದೆ ವ್ಯಾಸ ಮತ್ತು ವಾಲ್ಮೀಕಿಗಳ ಸಾಲಿನಲ್ಲಿಟ್ಟು ಹೊಗಳಿಸಿಕೊಳ್ಳುನವನು ದಂಡಿಯೇ ಎಂದ್ದು

ಜಾತೇ ಜಗತಿ ವಲ್ಮೀಕೌ ಶಬ್ದಃ ಫವಿರಿತಿ ಸ್ಮೃತಃ ಕನೀ ಇತಿ ತತೋ ವ್ಯಾಸೇ ಕವಯತಶ್ಚೇತಿ ದಂಡಿನಿ

ಎಂಬ ಪದ್ಯದಿಂದ ತಿಳಿದು ಬರುತ್ತದೆ. ಇನ್ನು ದಂಡಿಯನ್ನು ವ್ಯಂಗ್ಯವಾಗಿ ಹೊಗಳುವ ಕರ್ಣಾಟರಾಜಪ್ರಿಯೆಯು ವಿಜ್ಜೆ ಯೇ ಆಗಿರಬೇಕು. ಯಾಕಂದರೆ ದಂಡಿಗೂ ವಿಜ್ಞಿಕೆಗೂ ಸ್ನೇಹದ ಜಗಳೆ ವಾಗುತ್ತಿದ್ದುದನ್ನು ನೀರೋತ್ಸಲದಲಶ್ಯಾಮಾಮ್‌ ಎಂಬ ಪದ್ಯದಲ್ಲಿ ಈಗಾಗಲೇ ನೋಡಿದ್ದೇವೆ.

ವರೆಗಿನ ವಿನೇಚನೆಯಿಂದ ವಿಜಯಾಂಬಿಕೆ ಅಥವಾ ವಿಜ್ಞಿ ಕೆಯ್ಕು ದಂಡಿ ಮತ್ತು ರಾಜಶೇಖರರ ನಡುವಿನ ಕಾಲದಲ್ಲಿ ಅಂದರೆ ಮತ್ತು ೧೦ನೆಯ ಶತಮಾನಗಳ ಮಧ್ಯದಲ್ಲಿ ಆಗಿಹೋದಳೆಂದೂ ಕರ್ಣಾಟಕದ ರಾಜಮನೆತನಕ್ಕೆ ಸೇರಿದನಳೆಂದೂ ಸ್ಪಷ್ಟವಾಗುವದು.

ವಿಜ್ಞಿಕೆಯನೆಂದು ಪ್ರಸಿದ್ಧವಾದ ಪದ್ಯಗಳಲ್ಲಿ ಒಂದು ಪದ್ಯವು ಭಾರವಿಯ (೬ನೆಯ ಶತಕ) ಒಂದು ಪದ್ಯದ ಅನುಕರಣೆಯಂತಿದೆ. ವಿಜ್ಞಿಕೆಯೆ ಪದ್ಯಗಳನ್ನು ಮುಕುಲಭಟ್ಟ (೯ನೆಯ ಶತಕ)

೧೪ ಸಂಸ್ಕೃತ ಕವಯಿತ್ರಿಯರು

ಮನ್ಮಟ್ಕ ಭೋಜ ( ೧೧ನೆಯ ಶತಕ ) ವಿಶ್ವನಾಥ ( ೧೩ನೆಯ ಶತಕ) ನೊದಲಾದನರು ಉಲ್ಲೆ ಖಿಸುವರು. ಇದರಿಂದಲೂ

ಮೇಲೆ ನಿರ್ದೇಶಿಸಿದ ಕಾಲವೇ ಅವಳೆ ಕಾಲವಾಗಿರಬೇಕೆಂದು ದೃಢಪಡುವದು.

ವಿಜ್ಞಿಕೆಯದೆಂದು ಹೇಳಲಾಗುವ « ಕೌಮುದೀ ಮುಹೋತ್ಸನ' ಎಂಬ ನಾಟಕದ ಹಸ್ತಪ್ರತಿಯನ್ನು ತ್ರೀ ರಾಮಕೃಷ್ಣ ಕವಿಗಳು ಕೇರಲ ದೇಶದಲ್ಲಿ ದೊರಕಿಸಿ ಈಗ ೨೫ ವರ್ಷಗಳ ಹಿಂದ ಮುದ್ರಿಸಿ ರುವರು. ನಾಟಕದ ಪ್ರಸ್ತಾವನೆಯಲ್ಲಿ ನಾಟಕಕರ್ತೃವಿನ ಹೆಸ ರಿದ್ದ ಭಾಗವು ಹಸ್ತಪ್ರತಿಯಲ್ಲಿ ಹುಳತಿಂದು ಹೋಗಿ ಕಯಾ ನಿಬದ್ಧಮ್‌ ಎಂದಿಷ್ಟು ಮಾತ್ರ ಕಾಣುತ್ತಿತ್ತೆಂದು ಸಂಪಾದಕರು ಹೇಳುವರು. ಇದರಿಂದ ಕೃತಿಯು ಹೆಣ್ಣುಮಗಳದು ಎಂದಿಷ್ಟು ಮಾತ್ರ ಹೇಳಬಹುದಲ್ಲದೇ ಅನಳು ಯಾರು ಎಂದು ಹೇಳಲಾಗುವ ದಿಲ್ಲ. ಸಂಪಾದಕರು ಅದನ್ನು ( ವಿಜ್ಞಿಕಯಾ ' ಎಂದು ಹೊಂದಿಸಿ ರುವರು. ಸೂಕ್ಷ್ಮವಾಗಿ ಅದನ್ನು ನೋಡಿದರೆ ಒತ್ತಕ್ಷರದ "ಜ? ಕಾಣುತ್ತಿದೆ ಎಂದು ಸಂಪಾದಕರು ಹೇಳುವರು. ಶ್ರೀ ಕೆ. ಪ. ಜಯ ಸ್ವಾಲರೊಬ್ಬರನ್ನು ಬಿಟ್ಟರೆ ಉಳಿದೆಲ್ಲ ವಿದ್ವಾಂಸರು ಸಂಪಾದಕರ ಊಹೆಯನ್ನು ಒಪ್ಪಿದ್ದಾರೆ. ಮುಂದೆ ನಾಟಕದಲ್ಲಿ “ಜಯತಿ ಪ್ರಥಮಮ್‌ ವಿಜಯಾ” ಎಂಬ ಪದ್ಯದಲ್ಲಿ ಶ್ಲೇಷದಿಂದ ನಾಟಕ ಕಾರಳೆ ಹೆಸರನ್ನು ಸೂಚಿಸಿದೆಯೆನ್ನುವದು ಸಮಂಜಸವಾಗಿ ಕಾಣು ತ್ತದೆ. ಹೀಗೆ ನಾಟಕಕಾರಳು ವಿಜ್ಞಿ ಎಂಬ ನಿಕ್ಚಯಕ್ಕೆ ನಾವು ಬಂದರೂ ರಾಜಶೇಖರನು ಹೊಗಳಿದ ವಿಜ್ಞಿಕೆ ಅಥವಾ ವಿಜ ಯಾಂಬಿಕೆಗೂ ವಿಜ್ಜೆಕೆಗೂ ಸಂಬಂಧವನ್ನು ಕಲ್ಪಿಸಲು ಸಾಕಷ್ಟು ಸಾಧನಗಳು ಉಪಲಬ್ಧವಿಲ್ಲ. ಸುಭಾಷಿತಗಳೆಲ್ಲಿ ವಿಜ್ಞಿ ಕೆಯ ವೆಂದು ಪ್ರಸಿದ್ಧವಾದ ಯಾವದೇ ಪದ್ಯವು ನಾಟಕದಲ್ಲಿ ದೊರೆಯುವ

ಸಂಸ್ಕೃತ ಕವಯಿಂತ್ರಿಯರು ೧೫

ದಿಲ್ಲ ನಾಟಿಕದಲ್ಲಿಯ ಯಾವದೇ ಪದ್ಯವನ್ನು ಅಲಂಕಾರಿಕ ರಾಗಲೀ, ಸುಭಾಷಿತಕಾರರಾಗಲೀ ಉದಾಹೆರಿಸುವದಿಲ್ಲ. ನಾಟಕದ ಕಾಲವನ್ನು ಸ್ವತಂತ್ರವಾಗಿ ನಿರ್ಧರಿಸಲೂ ಸಾಕಷ್ಟು ಪ್ರಮಾಣ ಗಳಿಲ್ಲ. ಆದರೆ ನಾಟಕದ ಮಂಗಲ ಪದ್ಯದಲ್ಲಿ ಶ್ರೀ ಶಂಕರಾಚಾರ್ಯರ ಸ್ತುತಿಯಿದ್ದಂತೆ ಭಾಸವಾಗುತ್ತದೆ. ಇದು ಈಶ್ವರನ ಸ್ತುತಿಯಾಗಿ ದ್ದರೂ“ ನಾನಾತ್ವಗ್ರಂಥಿಭೇತ್ರೀಮ್‌” ಬ್ರಹ್ಮ ವ್ಯಾಖ್ಯಾನ ನಿಷ್ಕ” ಎಂಬ ಪದಗಳಿಂದ ಈಶ್ವರಾವತಾರರೆಂದು ಪ್ರಸಿದ್ಧರಾದ ಶ್ರೀ ಶಂಕರಾಚಾರ್ಯರ ಸ್ತುಕಿಯಂತೆಯೇ ಭಾಸವಾಗುತ್ತದೆ. ನಾಟಕದ ರಚನೆಯ ಕಾಲಕ್ಕೆ ಅದ್ದೆ ಪತೆ ಮತವು ಸ್ರಚಲಿತ ವಿತ್ತೆಂದು ಹೇಳಲಂತೂ ಯಾವ ಬಾಧಕವೂ ಇಲ್ಲ. ಶ್ರೀ ಶಂಕರಾ ಚಾರ್ಯರ ಕಾಲ ೮ನೆಯ ಶತಮಾನ ಆದುದರಿಂದ ನಾಟಕದ ಕಾಲವು ೮ನೆಯ ಶತಮಾನದಿಂದೀಚೆಗೆ ಎಂದಿಷ್ಟು ಮಾತ್ರ ಹೇಳಬಹುದು. ಇದರಿಂದ ಮೇಲೆ ವಿವೇಚಿಸಿದಂತೆ ವಿಜ್ವಿಕೆಯ ಕಾಲಾವಧಿಯಾದ ಮತ್ತು ೧೦ನೆಯ ಶತಕದ ಪರಿಮಿತಿಯಲ್ಲಿ ನಾಟಕದ ಕಾಲವನ್ನು ಹೊಂದಿಸಬಹುದೆಂಬುದನ್ನು ಮಾತ್ರ ಗಮನಿಸ ಬಹುದು.

ವಿಜ್ಞಿಕೆ ಅಥವಾ ನಿಜಯಾಂಬಿಕೆಯು ಕರ್ಣಾಟಕದನಳೂ ರಾಜಮನೆತನದನಳೂ ಎಂಬುದು ನಿಶ್ಚಿತವಾಗಿ ಕಂಡರೂ ಯಾವ ರಾಜಮನೆತನಕ್ಕೆ ಸೇರಿದವಳು ಎಂದು ನಿರ್ಧರಿಸುವದು ದುಷ್ಟರ ವಾಗಿದೆ. ಕರ್ನಾಟಕದಲ್ಲಿ ಆಳಿದ ರಾಜಮನೆತನಗಳಲ್ಲಿ (೧) ಚಾಲುಕ್ಯ ಮನೆತನದ ಮೂಲಸಂಸ್ಟಾಪಕ ವಿಷ್ಣುವರ್ಧನನ ತಾಯಿ, ವಿಜಯಾದಿತ್ಯನ ಹೆಂಡತಿ ವಿಜಯಾ ಎಂಬವಳೊಬ್ಬಳಿರುವದು ಕಂಡುಬರುವದು. (೨) ಪೂರ್ವ ಚಾಲುಕ್ಯ ಮನೆತನದಲ್ಲಿಯ ವಿಜಯಾದಿತ್ಯನೆಂಬ ಇನ್ನೋರ್ವನ ಹೆಂಡತಿ ವಿಜಯಾನುಹಾದೇವಿ

ಫೆ ೧೬ ಸಂಸ್ಕೃತ ಕವಯಿತ್ರಿಯಂರಂ

ಎಂಬವಳೊಬ್ಬಳಿದ್ದುದು ಪೀಠಪುರ ಶಾಸನದಲ್ಲಿಯ

ಏತೇಷು ವಿಜಯಾದಿತ್ಕೋ ಸೂರ್ಯಾನ್ವಯ ಸಮುದ್ಭೃವಾಮ್‌ | ಉಪಯೇಮೇಥ ವಿಜಯಾಮ್‌ ಮಹಾದೇವೀಮ್‌ ಮಹೀ ಸಮಾವರ್‌

ಎಂಬ ಪದೃದಿಂದ ತಿಳಿದುಬರುತ್ತದೆ. (೩) ಬಾದಾಮಿಯ ಚಾಲುಕ್ಯಮನೆತನದಲ್ಲಿ ಎರಡನೆಯ ಪುಲಿಕೇಶಿಯ ಸೊಸೆ ಚಂದ್ರಾ ದಿತ್ಯನ ಹೆಂಡತಿ ವಿಜಯಾ ಎಂಬವಳಿರುವದು ನೆರೂರು ಶಾಸನ ದಿಂದ ತಿಳಿದುಬರುತ್ತದೆ. (೪) ನೃಪತುಂಗನ ಸೇನಾಪತಿ ಬಂಕೇಶನೆಂಬವನ ಹೆಂಡತಿ ನಿಜಯಾ ಎಂಬವಳಿದ್ದಳೆಂದೂ ಅವಳು ಸಂಸ್ಕೃತ ಕವಯಿತ್ರಿಯಾಗಿದ್ದಳೆಂದೂ ಕರ್ನಾಟಕ ಗತವೈಭವ ಕಾರರು ಹೇಳುತ್ತಾರೆ. ನಾಲ್ವರಲ್ಲಿ ನಮ್ಮ ಕವಯಿತ್ರಿ ಯಾರು ಎಂದು ಹೇಳುವದು ಕಠಿಣ. ಚಾಲುಕ್ಯ ಮನೆತನದ ಮೂಲಪುರುಷ ನೆಂದು ಹೇಳೆಲಾಗುವ ವಿಷ್ಣುವರ್ಧನನ ವಿಷಯದಲ್ಲಿ ಪ್ರಚಲಿತ ವಿದ್ದ ಕಥೆಯು ಇನ್ನೂ ಕೇವಲ ಕಥೆಯಾಗಿದ್ದು ಐತಿಹಾಸಿಕ ದೃಷ್ಟಿಯಿಂದ ಅವನ ಕಾಲ ಮೊದಲಾದವುಗಳಾಗಲೀ ಕಥೆಯ ಸತ್ಯತೆಯಾಗಲೀ ನಿರ್ಣೀತವಾಗಿಲ್ಲ. ಬಾದಾಮಿ ಚಾಲುಕ್ಯ ಮನೆ ತನದ ಇತಿಹಾಸವು ಜಯಸಿಂಹನಿಂದಲೂ ಪೂರ್ಚ ಚಾಲುಕ್ಯ ಮನೆತನದ ಇತಿಹಾಸವು ವಿಷ್ಣುವರ್ಧನನಿಂದಲೂ ಪ್ರಾರಂಭವಾ ಗುವದು. ಆದುದರಿಂದ ಚಾಲುಕ್ಯ ಮನೆತನದ, ಇತಿಹಾಸಕ್ಕೆ ನಿಲುಕದ ಸಂಸ್ಥಾ ಪಕ ವಿಷ್ಣುವರ್ಧನನ ತಾಯಿ ವಿಜಯಾ ಎಂಬ ವಳೇ ಸಂಸ್ಕೃತ ಕವಯಿತ್ರಿ ವಿಜ್ಞಿಕಾ ಎಂಬ ಸೂಚನೆಯನ್ನು ಒಪ್ಪುವದು ಕಠಿಣ. ಅಲ್ಲದೆ ಕಾಲವು ದಂಡಿಗಿಂತ ಈಚಿನ ಕಾಲವಾಗಲಾರದು. ಹೀಠಪುರ ಶಾಸನದಲ್ಲಿ ಉಲ್ಲೇಖಿಸಿದ ವಿಜಯ

ಸಂಸ್ಕೃತ ಕವಯಿತಿ ಯರು. ೧೭

ಮಹಾಡೇವಿಯ ಕಾಲವು' ೧೨ನೆಯ ಶತಮಾನವಾಗಿದ್ದು ಸಂಸ್ಕೃತ ಕವಯಿತ್ರಿ ವಿಜ್ಞಿಕೆಯ ಕಾಲವನ್ನು ಅಷ್ಟು ಮುಂದಕ್ಕೆ ಹಾಕುವದೂ ೯-೧೦' ಶತಮಾನಗಳಲ್ಲಿಯೇ ಅವಳ ಉಲ್ಲೇಖ ಬಂದಿಕುವದರಿಂದ ಸಾಧ್ಯವಾಗಲಾರದು. ಇನ್ನುಳಿದ ಎರಡನೆಯ ಪುಲಕೇಶಿಯ ಸೊಸೆ ಚಂದ್ರಾದಿತ್ಯನ ಹೆಂಡತಿ ವಿಜ್ವಿ ಕೆಯಾಗಿರಬೇಕೆಂಬ ಅಭಿಪ್ರಾಯವು ತುಂಬಾ ಸ್ವಾಗತಾರ್ಹವಾದರೂ ಅದನ್ನು ಒಪ್ಪಿಕೊಳ್ಳಲು ಕೆಲವು ತೊಂದರೆಗಳಿವೆ. ಚಂದ್ರಾದಿತ್ಯನ ಕಾಲ ೭ನೆಯ ಶತಮಾನ. ನಾಟಕದಲ್ಲಿ ಶಂಕರಾಚಾರ್ಯರ ಸ್ತುತಿಯಿರುವದರಿಂದ ಅದರ ಕಾಲವನ್ನು ೮ನೆಯ ಶತಮಾನಕ್ಕಿಂತ ಹಿಂದಕ್ಕೆ ಹಾಕಲು ಬರುವ ದಿಲ್ಲ. ನಾಟಕದ ವಿಷಯವನ್ನು ತುಸು ಹೊತ್ತು ಬದಿಗಿಟ್ಟರೂ ವಿಜ್ಞಿಕೆಯ ಇನ್ನಿತರ ಪದ್ಯಗಳೂ ೯ನೆಯ ಶತಕದ ವರೆಗಿನ ಗ್ರಂಥ ಗಳಲ್ಲಿ ಉದಾಹೃತವಾಗಿಲ್ಲ. ಇಷ್ಟೊಂದು ಸರಸಳಾದ ಕವಯಿತ್ರಿಯ ಪದ್ಯಗಳನ್ನು ಸುಮಾರು ಎರಡುನೂರು ವರ್ಷ ಕಾಲ ಯಾರೂ ಉದಾಹೆರಿಸದಿರುವದಕ್ಕೆ ಕಾರಣವನ್ನು ಹೇಳುವದು ಕಠಿಣ. ಆದುದರಿಂದ ಕವಯಿತ್ರಿ ಕಾಲಾವಧಿಯನ್ನು ೭ರಿಂದ ೧೦ರ ವಕೆಗೆಂದು ಸ್ಥೂಲವಾಗಿ ಹೇಳಿದ್ದ ರೂ ೮೯ ಶತೆಕಗಳ ಮಧ್ಯಕ್ಕೆ ಅದನ್ನು ಪರಿಮಿತಗೊಳಿಸುವದು. ಹೆಚ್ಚು ಸಮಂಜಸವಾಗಿ ಕಾಣು ವದು. "ಮತ್ತು ಹೀಗೆ ಮಾಡಿದ : ಪಕ್ಷದಲ್ಲಿ ಪುಲಕೇಶಿಯ ಸೊಸೆ ವಿಜಯಭಟ್ಟುರಿಕೆ ನಮ್ಮ ಕವಯಿತ್ರಿಯಿರಬೇಕೆಂಬ ಊಹೆಯು ಸಂಶಯಾಸ್ಸದನಾಗುವದು. ಕೊನೆಯದಾಗಿ ನೃಷತುಂಗನ ಸೇನಾ ಪತಿ ಬಂಕೇಶನ ಹೆಂಡತಿ ಎಂಬವಳು ವಿಜ್ಜಿಕೆ ಎಂದರೆ, ನೃಪತುಂಗ ೯ನೆಯ . ಶತಕದನನಾದುದರಿಂದ ಕಾಲದ ತೊಂದರೆಯೇನಿಲ್ಲ ದಿದ್ದರೂ - ಅವಳನ್ನು. * ಕರ್ಣಾಟರಾಜಪ್ರಿಯಾ ಎಂದು ಸಂಬೋಧಿಸುವದು "ಹೋಗ್ಯವಾದೀತೇ A ವಿಚಾರಾರ್ಹ ಷ್ಠ

೧೮ ಸಂಸ್ಕೃತ ಕನಯಿತ್ರಿಯರು

ವಾದ ವಿಷಯ. ಹೀಗೆ ನಾಲ್ವರಲ್ಲಿ ಯಾಕೊಡನೆ ಹೊಂದಿಸು ವದೂ' ಕಠಿಣವಾಗಿರುವದರಿಂದ ಬಲವತ್ತರ ಪ್ರಮಾಣವು ದೊರೆ ಯುವತನಕ ವಿಷಯವನ್ನು ಇತ್ಯರ್ಥ ಮಾಡದೇ ಬಿಡುನದೇ ಯೋಗ್ಯವೆಂದು ಕಾಣುವದು. ವಿಜ್ಜಿಕೆಯ ಕೃತಿ ಕೌಮುದಿ ಮಹೋತ್ಸವ ವು ಐದಂಕಗಳ ಚಿಕ್ಕ ಐತಿಹಾಸಿಕ ನಾಟಕ. ವಿರಸಾಸಿ ಕೃತಿಃ ಪ್ರಪಶ್ಸ ತೇ ಮಧುನಿಷ್ಯಂದನುಯೀವರ್‌ ದಶಾಂತರಾವರ್‌ | ಯದಿ ನಾನು ಸತಾಮನುಗ್ರಹಃ ಶಿಶಿರಃ ಪ್ರಾಪ್ಯ ರವೇರಿವಾತಪಮ್‌ ಕೃತಿಯು ವಿರಸವಾಗಿದ್ದರೂ ಸಹೈದಯ ವಾಚಕರ ಅನುಗ್ರಹೆ ವಿದ್ದರೆ ಚಳಿಗಾಲದಲ್ಲಿಯ ಬಿಸಿಲಿನಂತೆ ಸುಖಕರವಾಗಿಯೇ ಪರಿ ಣಮಿಸುವದು ಎಂದು ವಿನಯದಿಂದಲೇ ಕವಯಿತ್ರಿಯು ನಾಟಕ ವನ್ನು ಆರಂಭಿಸುವಳು. ಪಾಟಲೀಪುತ್ರದಲ್ಲಿ ಸುಂದರವರ್ಮನೆಂಬ ರಾಜನಿದ್ದನು. ಅವನ ಆಶ್ರಯದಿಂದಲೇ ದೊಡ್ಡವನಾದ ಚಂಡಸೇನನೆಂಬ ಸೇನಾಪತಿಯು ಮಗಧಕುಲ ವೈರಿಗಳಾದ ಲಿಚ್ಛವಿಗಳೊಡನೆ ಸೇರಿಕೊಂಡು ರಾಜ ಧಾನಿಯನ್ನು ಆಕ್ರಮಿಸುವನು. ಆರಂಭದೆಶೆಯಲ್ಲಿ ಯುದ್ಧ ವು ರಾಜನಿಗೆ ಅನುಕೂಲವಾಗಿ ಕಂಡರೂ ಕೊನೆಯ ಗಳಿಗೆಯಲ್ಲಿ ರಾಜನು ಸಾಯುವನು. ಮಂತ್ರಿ ಮಂತ್ರಗುಪ್ತನು ರಾಜಕುಮಾರ ಕಲ್ಯಾಣವರ್ಮನನ್ನು ವಿಂಧ್ಯ ಪರ್ವತದಲ್ಲಿ ಗುಪ್ತನಾಗಿಟ್ಟು ರಾಜ್ಯ ವನ್ನು ತಿರುಗಿ ಪಡೆಯಲು ನೀತಿಜಾಲವನ್ನು ಹರಡುವನು. ಕಲ್ಯಾಣ ವರ್ಮುನು ಕುಂಜರಕನೆಂಬ ಸೇನಾಪತಿಯ ನಿರೀಕ್ಷಣೆಯಲ್ಲಿ ದೊಡ್ಡ ' ವನಾಗುವನು. ಮಥುರೆಯ ಅಧಿಪತಿ ಕೀರ್ಕಿಸೇಣನು ಕೀರ್ತಿ

ಸಂಸ್ಕೃತ ಕವಯಿತ್ರಿಯರು ೧೪

ಮತಿ ಎಂಬ ತನ್ನ ಮಗಳನ್ನು ವಿಂಧ್ಯವಾಸಿನೀ ದೇವಿಯ ಸೇವೆಗಾಗಿ ನಿಂಧ್ಯಾಟವಿಗೆ ಕಳಿಸುವನು. ಅಲ್ಲಿ ಕಲ್ಯಾಣವರ್ಮನಿಗೂ ದೇವಸ್ಥಾನದಿಂದ ಹಿಂದಿರುಗಿ ಬರುವ ಕೀರ್ರಿಮತಿಗೂ ಆದ ಪ್ರಥಮ ದರ್ಶನ ಮತ್ತು ಪ್ರೇಮಾಂಕುರಗಳೇ ನಾಟಕದ ಮೊದಲನೆಯ ಅಂಕಿನ ನಿಷಯವಾಗಿನೆ. ಪ್ರಥಮ ದರ್ಶನದ ರೀತಿಯು ಸಾಮಾನ್ಯ ವಾಗಿ ಕಾಲಿದಾಸನ ರೀತಿಯನ್ನು ಹೋಲುತ್ತಿದ್ದರೂ ಕನಯಿತ್ರಿಯು ನಾಯಿಕೆಯ ಭಾವವನ್ನು ಚಿತ್ರಿಸುವದರಲ್ಲಿ ತನ್ನ ಕೌಶಲ್ಯವನ್ನು ತೋರಿಸಿರುವಳು. ನಾಯಕನು ತಾನು ಪಾಟಲೀಪುತ್ರದಲ್ಲಿ ಇನ್ನೂ ಚಿಕ್ಕವನಾಗಿರುವ ಕಾಲದಲ್ಲಿಯ ಪರಿಸ್ಥಿತಿ ಮತ್ತು ತನ್ನ ಇಂದಿನ ಪರಿಸ್ಥಿ ತಿಯನ್ನು ಚಿಂತಿಸುತ್ತ ಒಂದು ಅಶೋಕವೃಕ್ಟದ ಬದಿಯಲ್ಲಿ ಕುಳಿತಾಗೆ ಬಲಭುಜ ಹಾರುವದು. ಮರುಕ್ಸಣದಲ್ಲಿಯೇ ಸೈಜಣ ಗಳ ಮಧುರ ಶಬ್ದವು ಕೇಳಬರುವದು. ಶಬ್ದವು ಬರುವ ದಿಶೆ ಯಲ್ಲಿ ದೃಷ್ಟಿಯನ್ನು ಹೊರಳಿಸಿದಾಗ ಅಸಾಧರಣ ಸೌಂದರ್ಯ ವುಳ್ಳ ಯುವತಿಯೋರ್ವಳು ದೃಷ್ಟಿಗೆ ಬೀಳುವಳು. ಅನುಸಮ ಸೌಂದರ್ಯವುಳ್ಳೆ ಅವಳ ಶರೀರವು ಬ್ರಹ್ಮಸೃಷ್ಟಿಯಾಗಿರಲಾರದು. ಶಂಕರನನ್ನು ಜಯಿಸಲು ಮದನನು ಮಾಡಿದ ತಪಸ್ಸಿನ ಫಲವೇ ಅವಳಿರಬೇಕೆಂದು ತರ್ಕಿಸುನನು. ಉತ್ತಮಶ್ರೀಲಕ್ಬಣವೇ ರೂಪತಾಳಿ ಬಂದಂತೆ ತೋರುವದು. “" ನನನಧೂರೇಷಾ" ವಭೂ ಲಕ್ಷಣಮ್‌ " ಎಂದು ಉದ್ಗಾರ ತೆಗೆಯುನನು. ಅಲ್ಲಿದ್ದ. ರಾಜ ಕುಮಾರನನ್ನು ನೋಡಿ ರಾಜಕುಮಾರಿಯೂ ಚಕಿತಳಾಗುಪಳು. ಅವಳೊಡನೆ ವೃದ್ಧ ಕಂಚುಕಿಯೂ ನಿಪುಣೆಯೆಂಬ ದಾಸಿಯೂ ಇರುವರು. ಕಲ್ಯಾಣವರ್ಮನು ತಾನು ಮೊದಲೇ ಅಲ್ಲಿದ್ದನೆಂಬ ಹಳ್ಳಿನಿಂದ ಅನರನ್ನು ಅತಿಥಿಗಳೆಂದು ಬರಮಾಡಿಕೊಳ್ಳುವನು. ಕೀರ್ರಿಮತಿಯ ಕುಲಗೋತ್ರಗಳನ್ನೂ, ಅಲ್ಲಿಗೆ ಬಂದ ಕಾರಣವನ್ನೂ

೨೦ ಸಂಸ್ಕೃತ ಕವಯಿತ್ರಿಯರು

ನೇರವಾಗಿಯೇ ಕಂಚುಕಿಯನ್ನು ಕೇಳುವನು. ಅಡವಿಯಲ್ಲಿ ಕೋಮಲೆಯನ್ನು ವೃತಾಚರಣೆಗಾಗಿ ಕಳಿಸಿದ್ದು ಅಯುಕ್ತವೆಂದು ಸಾರುವನು. ಔಪಚಾರಿಕ ಸಂಭಾಷಣೆಯ ಮಧ್ಯದಲ್ಲಿ ನಾಯಕ. ನಾಯಿಕೆಯರು ಪರಸ್ಪರ ದರ್ಶನಲಾಭ ಪಡೆಯುವರು..." * ಜನ ಪ್ರಕಿಸಿದ್ಧಪ್ರಸರಾಹಿ ಪುನಃಪುನಸ್ತತ್ರೈವ ದೃಷ್ಟಿಃ ಪ್ರಸರತಿ. ಜನರಿರುವದರಿಂದ ತಡೆದುಕೊಂಡರೂ ನನ್ನ ದೃಷ್ಟಿಯು ಮತ್ತೆ ಮತ್ತೆ ಅವನ ಕಡೆಗೇ ಹರಿಯುತ್ತದೆ ಎಂದು (ಸ್ವಗತದಲ್ಲಿ) ಹೇಳಿ ಕೀರ್ತಿಮತಿ ಪ್ರೇಕ್ಷಕರಿಗೆ ತನ್ನ ಗುಟ್ಟನ್ನು ರಟ್ಟು ಮಾಡುತ್ತಾಳೆ. ವಿಶ್ರಾಂತಿಗಾಗಿ ಕುಟೀರವೊಂದನ್ನು ರಚಿಸಲು ಕಳಿಸಿದ ಸಿಂಹೆಲಕನು ಕರೆಯಲು ಬಂದಾಗ ಅನರು ಅಗಲಬೇಕಾಗುತ್ತದೆ. ನಾಯಿಕೆಯು ಅಗಲು ವಾಗ ತನ್ನ ಕಟಾಕ್ಬ್ಚಗಳಿಂದ ನಾಯಕನ ಹೈದಯವನ್ನು ಎತ್ತಿ ಕೊಂಡು ತನ್ನ ಹೈದಯವನ್ನು ಅನನಲ್ಲಿಟ್ಟು ಹೋಗುನಳೋ ಎಂಬಂತೆ ನಾಯಕನಿಗೆ ಭಾಸವಾಗುವದು.

ಯಾತಾ ನಿತಂಬಗುರ್ನಿೀ

ಯಾನೆದ್ಮಾವನ್ಮ್ಯಗೇಕ್ಷಣಾ ದೂರಮ್‌

ಬಿಂಬಿತಗಾತ್ರೀ ವಾಂತೆಃ

ತಾವತ್ತಾನದನಗಾಢಾ ಮೇ

4 ಕನ್ನಡಿಯಲ್ಲಿಯ ಪ್ರತಿಬಿಂಬದಂತೆ ಅವಳು ದೂರ ದೂರ ಹೋದಷ್ಟೂ ನನ್ನಲ್ಲಿ ಆಳವಾಗಿ ಸೇರಿಕೊಂಡಳು” ಎಂದು.ಕಲ್ಯಾಣ ವರ್ಮನು ತನ್ನ ಚಿತ್ತದಲ್ಲಿ ಅವಳು ಗಾಢವಾಗಿ ಸೇರಿಕೊಂಡದ್ದನ್ನು ಸ್ವಾರಸ್ಯವಾಗಿ ಹೇಳುವನು. ನಾಯಕನಿಗೆ ತನ್ನ ಹೈದಯವನ್ನು ತೋಡಿಕೊಳ್ಳಲು ಒಬ್ಬರು ಬೇಕಾಗಿರುವ ವೇಳೆಗೆ ಸರಿಯಾಗಿ 'ವಿದೂಷಕನು ಅಲ್ಲಿಗೆ ಬರುವನು. ರಾಜಕುಮಾರನು ಹರ್ವ ಯುವತಿಯ ಮೋಹಕ್ಕೆ ಬಿದ್ದಿರುವನು ಎಂದು ತಿಳಿದು ವಿದೂಸ

ಸಂಸ್ಕೃತ ಕವಯಿತ್ರಿಯರು ೨೧

ಕನು ಅಂಧಸ್ಯ ಕೂಪಪತನಮ್‌ ಸಂವೃತ್ತಮ್‌ ಪೂರ್ವಮ್‌ ರಾಜ್ಯನಾಶಃ ತತಃ ಸ್ತ್ರೀ ತಂತುನಾ ಬಂಧನಮ್‌” ಇದು ಕುರುಡನು ಭಾವಿಗೆ ಬಿದ್ದಂತಾಯಿತು. ಮೊದಲೇ ರಾಜ್ಯವನ್ನು ಕಳೆದು ಕೊಂಡಿರುವಿ; ಇದೀಗ ಹೆಣ್ಣೆಂಬ ಹಗ್ಗದಿಂದ ಬಿಗಿದುಕೊಳ್ಳು ತ್ರಿರುನಿ ಎಂದು ಹೇಳಿದಾಗ, ಪ್ರೇಮಿಗಳೆ ಭಾವನೆಗಳೆನ್ನರಿಯಲಾರದ ಅವನ ಮಾತಿನಿಂದ ಪ್ರೇಕ್ಷಕರು ನಗದಿರಲಾರರು. ಅವಸರದಿಂದ ತಿರುಗಿ ಹೋಗುವಾಗ ಬಳ್ಳಿಗೆ ಸಿಕ್ಕ ಸೆರಗನ್ನು ಬಿಡಿಸಿಕೊಳ್ಳುವ ಭರದಲ್ಲಿ ಕೆಳೆಗೆ ಬಿದ್ದ ಕೀರಿಮತಿಯ ಹಾರವು ಹೊಟ್ಟೆಬಾಕ ವಿದೂಷಕನಿಗೆ ಅನ್ನದ ರಾಶಿಯಂತೆ ಕಂಡರೆ ನಾಯಕನಿಗೆ ತನ ಗಾಗಿ ಬಿಟ್ಟುಹೋದ ಅವಳ ಹೃದಯವೆಂದೇ ಭಾಸವಾಗುವದು. ಪ್ರೀತಿಯಿಂದ ಅದನ್ನು ಎತ್ತಿಕೊಂಡು ನಾಯಕನು ಸೇವಕರ ಸೂಚನೆ ಯಂತೆ ತನ್ನ ದಿನಚರ್ಯೆಗಾಗಿ ಹೊರಡುವನು.

ಎರಡನೆಯ ಅಂಕದಲ್ಲಿ ನಾಯಿಕೆ ಮದನಬಾಧೆಯಿಂದ ಅಸ್ವಸ್ಥ ಳಾಗುವಳು ನಾಯಕನ ಚಿತ್ರವನ್ನು ಬರೆಯುವಳು. ಶ್ಯೇನ ಪಕ್ಷಿಯೊಂದು ಚಿತ್ರವನ್ನು ಎತ್ತಿಕೊಂಡು ಹೋಗಿ ಕೀರ್ತಿಮತಿಯ ಸಾಕು ತಾಯಿ ಯೋಗಸಿದ್ದಿಯಿದ್ದಲ್ಲಿಗೆ ಒಯ್ದು ಒಗೆಯುವದು. ಯೋಗಸಿದ್ಧಿಯು ಈಗಸನ್ಯಾಸಿನಿ ; ಮೊದಲು ಅನಳು ಮಗಧದೇಶದ ರಾಜ ಸುಂದರವರ್ಮನ ಅರಮನೆ ಯಲ್ಲಿ ಕೆಲಸಕ್ಕಿದ್ದಳು. ಕಲ್ಯಾಣವರ್ಮನ ದಾಯಿಯಾಗಿ ದಳು. ಚಂಡಸೇನನು ನಗರವನ್ನು ಆಕ್ರಮಿಸಿದ ನಂತರ ಕಲ್ಯಾಣವರ್ಮನು ಕಳೆದುಹೋದ ಮೇಲೆ ಜೀವನದಲ್ಲಿ ಸಿರಾಶೆ ಯನ್ನು ತಾಳಿ ಸನ್ಯಾಸಿನಿಯಾಗಿ ದೇಶದಿಂದ ದೇಶಕ್ಕೆ ಅಲೆ ಯುತ್ತಿದ್ದಾಗ ಕೀರ್ತಿಮತಿಯ ತಾಯಿಯ ಆಗ್ರಹೆದಿಂದ ಅವಳ ಅರಮನೆಯಲ್ಲಿದ್ದಳು. ಈಗ ಕೀರ್ರಿಮತಿಯೊಡನೆ ವಿಂಧ್ಯಾಟವಿಗೆ

೨೨ ಸಂಸ್ಕೃತ ಕವಯಿತ್ರಿಯರು

ಬಂದಿದ್ದಳು. ತನ್ನ ಹತ್ತಿರ ಶ್ಯೇನವು ತಂದೊಗೆದ ಚಿತ್ರವನ್ನು ನೋಡಿ ಅವಳಿಗೆ ಹಿಂದಿನಡೆಲ್ಲ ನೆನಪಾಗುವದು. ಚಿತ್ರದಲ್ಲಿಯ ರಾಜಕುಮಾರನು ತಾನು ಸಾಕಿದ ಕಲ್ಯಾಣವರ್ಮನೇ ಎಂಬು ದನ್ನೂ ತಾನೇ ಸಾಕಿದ ಕೀರ್ರಿಮತಿಗೆ ಅವನಲ್ಲಿ ಪ್ರೇಮ ಉಂಟಾ ಗಿದೆಂಬುದನ್ನೂ ನಿಪುಣಿಕೆಯಿಂದ ತಿಳಿದು ಅವಳಿಗೆ ತುಂಬ ಸಂತೋಷವಾಗುವದು. ಮುನ್ತ್ರಿನ ವಯಸ್ಸಿನಲ್ಲಿಯೂ ಕೂಡ ಕಲ್ಯಾಣವರ್ಮನ ನೆನಪಾದೊಡನೆ ಮೊಲೆಹಾಲು ತೊಟಕಿಕ್ಳು ತ್ತದೆ ಎಂಬ ಮಾತಿನಿಂದ ಅವಳ ಸಂತೋಷದ ಆಳವನ್ನು ತಿಳಿದು ಕೊಳ್ಳಬಹುದು. ಹಾರವನ್ನು ತಿರುಗಿ ಕೊಡುವ ನೆನಮಾಡಿ ನಾಯಕನ ಪರವಾಗಿ ಪ್ರೇಮಸಂಧಾನ ಮಾಡಲು ಬಂದ ವಿದೂ ಸಕನು ಮರೆಯಲ್ಲಿ ನಿಂತು ನಿಪುಣಿಕೆ ಯೋಗಸಿದ್ಧಿಯರ ಸಂಭಾ ಷಣೆಯನ್ನು ಕೇಳುತ್ತಿದ್ದವನು ನಾಯಿಕೆಗೆ ಪ್ರೇಮ ಉಂಟಾಗಿರುವ ದನ್ನೂ ಯೋಗಸಿದ್ದಿ ಯು ಇವರಿಬ್ಬರನ್ನೂ ಕೂಡಿಸುವದರಲ್ಲಿ ಆಸ್ಥೆ ತಾಳುತ್ತಿರುನದನ್ನೂ ಕಂಡು ಭಿಕ್ಷೆಗೆ ಹೊರಟವನಿಗೆ ಮೃಷ್ಟಾನ್ಸ ದೊರೆತಂತಾಯಿತೆಂದು ಹೇಳುತ್ತ ಮುಂದೆ ಬಂದು ಯೋಗಸಿದ್ದಿಗೆ ನಮಸ್ಯರಿಸುವನು. ವಿದೂಷಕನ ಪಾತ್ರವು ಸಂಸ್ಕೃತ ನಾಟಕ ಗಳಲ್ಲಿ ಹಾಸ್ಯ ಪಾತ್ರ. ವೇಷ ಮತ್ತು ಮಾತಿನಿಂದ ಅವನು ಹಾಸ್ಯವನ್ನುಂಟುಮಾಡಬೇಕೆಂದು ಲಕ್ಷಣಕಾರರು ಹೇಳಿದ್ದಾರೆ. ವಿದೂಷಕನು ರಂಗಕ್ಕೆ ಬಂದೊಡನೆ ಅವನನ್ನು ನೋಡಿ ನಿಪುಣಿಕೆಯು « ಏಷ ಆಕೃತ್ಯಾ ಮರ್ಶಟಃ ವಾಚಾ ಗರ್ಧಭಃ? ನೋಡಲು ಮಂಗ ಮಾತನಾಡಿದರೆ ಕತ್ತೆಯಂತಿರುವ ಇವನು ಯಾರು? ಎಂದು ಕೇಳಿದಾಗ ವಿದೂಷಕನ ರೂಪ ನಮ್ಮ ಕಣ್ಣಮುಂದೆ ಸುಲಭವಾಗಿ ಬಂದು ಹೋಗುವದು. ವಿದೂಷಕನ ಸೌಂದರ್ಯದ ಬಗ್ಗೆ. ಇಷ್ಟೊಂದು ಉದಾರವಾದ ಅಭಿಪ್ರಾಯ

ಸಂಸ್ಕೃತ ಕವಯಿತ್ರಿಯರು ತಿಷ

ವನ್ನಿಟ್ಟುಕೊಂಡ ನಿಪುಣಿಕೆಗೆ ಕೀರ್ತಿ ಮತಿಯು ಕಲ್ಯಾಣನರ್ಮನ ಚಿತ್ರವನ್ನು ಬರೆದಿದ್ದಾಳೆ, ನೀನು ನನ್ನ ಚಿತ್ರವನ್ನು ಬರೆಯಬೇಕೆಂದು ಅವನು ಹೇಳಿದಾಗ ನಗು ತಡೆಯದಾಗುವದು. ಹಾರವನ್ನು ಕೊಟ್ಟು ಚಿತ್ರಪಟವನ್ನು. ತೆಗೆದು ಕೊಂಡು ವಿದೂಷಕನು ಮರಳುವನು. ಯೋಗಸಿದ್ಧಿ ಮತ್ತು ನಿಪುಣಿಕೆಯರೂ ಕೂಡ ಪ್ರೇಮಿಗಳನ್ನು ಕೂಡಿಸುವ ಮುಂದಿನ ಯೋಜನೆಗಾಗಿಹೊರಡುವರು. ಮೂರನೆಯ ಅಂಕದಲ್ಲಿ ನಾಯಕನಿಗೆ ನಾಯಿಕೆ ಬರೆದ ತನ್ನ ಚಿತ್ರವನ್ನು ನೋಡಿ ಉಂಟಾದ ಉತ್ಸಾಹ ತನ್ನ ಸಾಕುತಾಯಿ ಯೋಗಸಿದ್ಧಿಯ ವಿಚಾರನನ್ನು ತಿಳಿದು ಆದ ಆನಂದ ಚಿತ್ರಿತವಾಗಿವೆ. ನಾಲ್ಕನೆಯ ಅಂಕದಲ್ಲಿ ಪ್ರೇಮದ ಕಥೆಯು ಹಿಂದೆ ಸರಿದು ರಾಜಕೀಯ ಘಟನೆಗಳು ಪ್ರಾಮುಖ್ಯವನ್ನು ಪಡೆಯುತ್ತವೆ. ಕಲ್ಯಾಣನರ್ಮನು ನಿಂಧ್ಯಾಟನಿಯಲ್ಲಿ ದೊಡ್ಡವನಾಗುತ್ತಿರುವದ್ಕೂ ಕೀಶ್ರಿಮತಿಯ ಸಮಾಗಮವೂ, ಆಕಸ್ಮಿಕಘಟನೆಗಳಾಗಿರದೆ ಮಂತ್ರ ಗುಪ್ತನ ರಾಜಕಾರಣದ ಅಂಗಗಳಾಗಿವೆ. ಶೂಲಪಾಣಿಯ ಸಿದ್ಧಾಯ ತನದಲ್ಲಿ ಆರ್ಯರಕ್ಷಿತನೆಯ ಮಂತ್ರಗುಪ್ತನ ಆಪ್ತಸೇವಕನು ಪಾಶುಪತನ ವೇಷದಲ್ಲಿದ್ದು ಕಾರ್ಯ ಮಾಡುತ್ತಿದ್ದನು. ಅಲ್ಲಿಗೆ ವರ್ಧಮಾನನೆಂಬ ಇನ್ನೊಬ್ಬ ಗುಪ್ತಚಾರನೂ ಬರುವನು. ಅವ ರಿಬ್ಬರ ಸಂಭಾಷಣೆಯಿಂದ ಮಂತ್ರಗುಪ್ತನ ಪ್ರಚೋದನೆಯಿಂದ ವಿರುದ್ಧರಾದ ಗಡಿರಕ್ಸಕರನ್ನು ಬಗ್ಗುಬಡೆಯಲು ಚಂಡಸೇನನು ರಾಜಧಾನಿಯನ್ನು ಬಿಟ್ಟು ಹೊರಗೆ ಹೋಗಿರುವದಾಗಿಯೂ, ಸಂಧಿಯನ್ನು ಸಾಧಿಸಿ ಕಲ್ಯಾಣನರ್ಮನನ್ನು ರಾಜಧಾನಿಗೆ ಕರೆದು ಕೊಂಡು ಹೋಗುನ ಸಿದ್ಧತೆ ನಡೆಯುತ್ತಿರುವದಾಗಿಯೂ ತಿಳಿದು ಬರುವದು. ಚಂಡಸೇನನನ್ನು ಹೊರಗೆ ಕಳಿಸಿರುವದಲ್ಲದೆ ರಾಜ ಕುಮಾರನ ನಿಷಯವಾಗಿ ಜನಾಭಿಪ್ರಾಯವು ತು ಅನುಕೂಲ

೨೪ ಸಂಸ್ಕೃತ ಕವಯಿತ್ರಿಯರು

ವಾಗಿಯೂ ಚಂಡಸೇನನ ವಿಷಯದಲ್ಲಿ ಅತ್ಯಂತ ಪ್ರತಿಕೂಲ- ವಾಗಿಯೂ ಆಗುವಂತೆ ಮಂತ್ರಗುಪ್ತನು ಮಾಡಿರುವನು. « ಶತ್ರೋ ಕೇಕರೋಷ್ಕನಧನಮಪಾಚ್ಯರಿಷ್ಯಂತಿ' ಈಗ ಶತ್ರು ಚಂಡಸೇನ ನನ್ನು ಪ್ರಜೆಗಳು ತಲೆಗೊಂದೊಂದು ಕಲ್ಲು ಒಗೆದು ಕೊಲ್ಲಲೂ ಸಿದ್ಧ ರಿರುವರು ಎನ್ನುವಷ್ಟು ಜನಾಭಿಪ್ರಾಯವು ಅವನಿಗೆ ಪ್ರತಿ ಕೂಲವಾಗಿರುವದು.

ನಾಲ್ಬನೆಯ ಅಂಕಿನ ಮುಖ್ಯ ದೃಶ್ಯದ ಘಟನೆ ರಾತ್ರಿಯಲ್ಲಿ ನಡೆಯುವದು. ವೀರಸೇನನೆಂಬ ಚಾರನು ರಾತ್ರಿಯಲ್ಲಿ ಮಂತ್ರ ಗುಪ್ತನನ್ನು ಸಂಧಿಸುವನು. ವೀರಸೇನನು ಬಂದೊಡನೆ ಅವನನ್ನು ಕೈಹಿಡಿದು ಬರಮಾಡಿಕೊಳ್ಳುವದೂ, ತನ್ನ ಹಾಸಿಗೆಯ ಮೇಲೆಯೇ ಕುಳಿತುಕೊಳ್ಳಲು ಹೇಳುವದೂ, ಆದರೂ ಅವನು ನೆಲದ ಮೇಲೆ ಕೂಡ್ರುವದೂ ಮಂತ್ರಗುಪ್ತನು ತನ್ನ ಸಹೆಕಾರಿಗಳೊಂದಿಗೆ ಎಷ್ಟು ಗೌರವದಿಂದ ನಡೆದುಕೊಳ್ಳುತ್ತಿದ್ದನೆಂಬುದನ್ನೂ ಸಹಕಾರಿಗಳೆ ಶಿಸ್ತು ಮತ್ತು ವಿನಯಶೀಲತೆಯನ್ನೂ ತೋರಿಸುತ್ತವೆ. ಅಂಕದ ತುಂಬೆಲ್ಲ ಕಂಡುಬರುವ ರಾಜನೀತಿಯಲ್ಲಿಯ ಕೌಶಲ್ಯ ಮತ್ತು

ಜಕೀಯದಲ್ಲಿಯ ರೀತಿನೀತಿಗಳ ಸೂಕ್ಷ್ಮ ಪರಿಚಯವನ್ನು ಪರಿ ಶೀಲಿಸಿದರೆ ನಮ್ಮ ಕವಯಿತ್ರಿಗೆ ನಿಷಯೆಗಳ ಪ್ರತ್ಯಕ್ಷ ಸಂಬಂಧ ವಿರಬೇಕೆಂದು ಭಾಸವಾಗುತ್ತದೆ. ವೀರಸೇನನು ರಾಜಕುಮಾರನು ವಿಂಧ್ಯಾ ಟಿವಿಯಿಂದ ಪರಿಮಿತ ಸೈನ್ಯದೊಡನೆಯೂ ಸಮವಯಸ್ಸ ರಾದ ಕೆಲನರೊಡನೆಯೂ ಹೊರಟರುವನೆಂದೂ ಬೆಳೆಗಿನ ಹೊತ್ತಿಗೆ ರಾಜಧಾನಿಯನ್ನು ಮುಟ್ಟಬಹುದೆಂದೂ ತಿಳಿಸುವನು. ರಾಜಕೀಯ ಉದ್ದೇಶಕ್ಕಾಗಿ ಪ್ರೇಮದ ನಾಟಕನನ್ನು ಹೂಡಿದ ಮಂತ್ರಗುಪ್ತ, ನಿಗೆ ರಾಜಕುಮಾರನ ಮನಸ್ಸು ಯಾವ ಕಡೆಗೆ ಹೆಚ್ಚು.ಹೆರಿಯು ತ್ರಿದೆಯೋ ಎಂಬ ಚಿಂತೆಯಾಗಿದೆ. ಪ್ರೇಮದ ಗೊಂದಲದಲ್ಲಿಯೇ:

ಸಂಸ್ಕೃತ ಕಸಯಿತ್ರಿಯಂರತ ೨೫

ಸಿಲುಕಿ ರಾಜಕೀಯದ ಕಡೆಗೆ ಉದಾಸೀನನಾಗುವದೂ ಅವನಿಗೆ ಬೇಡ. ರಾಜಕೀಯದ ಒತ್ತಡದಿಂದ ಇತ್ತ ಬರಬೇಕಾದುದರಿಂದ ಮತ್ತು ಕೀರ್ರಿಮತಿಯೂ ಹೊರಟುಹೋದದ್ದರಿಂದ ರಾಜ ಕುಮಾರನ ಮನಸ್ಸು ಮುರಿಯುವದೂ ಬೇಡ. ರಾಜಕುಮಾರನು ರಾಜಧಾನಿಗೆ ತಿರುಗಿ ಬರುವದಕ್ಕೂ, ರಾಜ್ಯವನ್ನು ತಿರುಗಿ ದೊರ ಕಿಸುವದಕ್ಟೂ ತುಂಬ ಉತ್ಸಾಹೆದಿಂದ ಪ್ರವೃತ್ತನಾಗಿರುವನೆಂದು ವೀರಸೇನನಿಂದ ತಿಳಿದು ಮಂತ್ರಗುಪ್ತನು ಸಂತೋಷಗೊಳ್ಳು ವನು. ಶತ್ರುಗಳ ಮೇಲಿನ ಕೋಪದಿಂದ ಅವನ ಹೈದಯ ಕಾದದ್ದರಿಂದ ಮಧ್ಯಾಹ್ನ ದಲ್ಲಿ ರಾಜಹೆಂಸಿಯು ಸರೋವರದ ಕಾದ ನೀರನ್ನು ಬಿಡುವಂತೆ ಕೀರ್ರಿಮತಿಯೇ ಅದನ್ನು ಬಿಟ್ಟಿರಬೇಕೆಂದು ಉತ್ರೇಕ್ಷಿಸುವನು. ಮಂತ್ರಗುಪ್ತನು ಮದುವೆಯ ಮಾತುಗಳ ನ್ಲಾಡಲು ಪುರೋಹಿತನ ಮಗನನ್ನು ಈಗಾಗಲೇ ಕೀರ್ರಿಮತಿಯ ತಂದೆಯ ಕಡೆಗೆ ಕಳಿಸಿರುವನು. ಇವರ ಸಂಭಾಷಣೆಯು ಮುಂದು ನರೆದಿರುವಾಗಲೇ ರಾಜಕುಮಾರನು ನಗರಕ್ಕೆ ಬಂದುಮುಟ್ಟಿದ ಗದ್ದಲ ಕೇಳುವದು. ಸೂರ್ಯನು ಸಮುದ್ರದಿಂದ ಮೇಲೇಳುವನು.

ಐದನೆಯ ಅಂಕದಲ್ಲಿ ಮತ್ತೆ ನಾವು ಪ್ರೇಮದ ಕಥೆಗೆ ಹಿಂತಿರು ಗುವೆವು. ಕೀರ್ರಿಮತಿ ಯೋಗಸಿದ್ಧಿಯರು ತಮ್ಮೂರಿಗೆ ಮರ ಳಿದ ಮೇಲೆ ಯೋಗಸಿದ್ಧಿಯು ತನ್ನಲ್ಲಿದ್ದ ಚಿತ್ರಪಟವನ್ನು ಭವಾನಿಯು ಸ್ವಪ್ನದಲ್ಲಿ ತನಗೆ ಕೊಟ್ಟಳೆಂದೂ ಕಲ್ಯಾಣವರ್ಮ ನೊಡಕೆ ಕೀರ್ತಿಮತಿಯ ವಿವಾಹವಾಗಬೇಕೆಂಬುದು ಅವಳ ಆಜ್ಞೆ ಎಂದೂ ಕೀರ್ರಿಮತಿಯ ತಂದೆ ತಾಯಿಗಳಿಗೆ ಹೇಳಿ ಅವರನ್ನು ಒಡಂಬಡಿಸುವಳು. ಅದೇ ಹೊತ್ತಿಗೆ ಮಂತ್ರಗುಪ್ತನು ಕಳಿಸಿದ ಪುರೋಹಿತನ ಮಗನೂ ಅಲ್ಲಿಗೆ ಬರುವನು. ಯೋಗಸಿದ್ಧಿ ಕೀರ್ತಿಮತಿ ಮತ್ತು ಪುರೋಹಿತರು ಪಾಟಲೀಪುತ್ರಕ್ಕೆ ಬರು

೨೬ ಸಂಸ್ಕೃತ ಕನೆಯಿತ್ರಿಯರೆ

ವರು. ಉದ್ಯಾನದಲ್ಲಿ ಕಲ್ಯಾಣನರ್ಮನೂ ಕೀರ್ತಿಮತಿಯೂ ಮತ್ತೊಮ್ಮೆ ಸಂಧಿಸುವರು. ತಾವು ರೀತಿಯಾಗಿ ಕೂಡಿಕೊಳ್ಳು ವದರಲ್ಲಿ ಮಂತ್ರಗುಪ್ತನ ಕೈವಾಡವಿದೆಯೆಂದು ತಿಳಿದು ರಾಜನು ಸಂತೋಷನಡುನನು. ಅವನ ಸ್ವಾಮಿನಿಷ್ಕೆಯನ್ನು ಪ್ರಶಂಸಿಸು ನತ ಅಸ್ಬೊತ್ತಿಗೆ ಮುಗಿಲಲ್ಲಿ ಸಂಜೆಯ ಮೋಡಗಳು ಕಟ್ಟ ಅವುಗಳ ಗರ್ಜನೆಗೆ ನಾಯಿಕೆ ಗಾಬರಿಯಾಗಿ ನಾಯಕನನ್ನು ಅಪ್ಪಿಕೊಳ್ಳಲು ಮಳೆಗಾಲದ ಆರಂಭವನ್ನು ವಕ್ಷಿಸುತ್ತ ನಾಯಕನು ಅಂತರ್ಗೃ್ಯಹನನ್ನು ಸೇರುವರು. ಮಳೆಗಾಲದ ಆರಂಭದ ವರ್ಣನೆಯ ಕೊನೆಯ ಪದ್ಯವು ನೀಲಕಂಠನ ಸ್ತುತಿಯೂ ಆಗಿದ್ದು ನಾಟಕದ ಸಮಾಶ್ರಿಯನ್ನು ಸೂಚಿಸುವದು.

ರೀತಿಯಾಗಿ ಪ್ರೇಮ ಮತ್ತು ರಾಜಕೀಯದ ಘಟನೆಗಳ ನ್ನೊಳಗೊಂಡ ಚಿಕ್ಕ ನಾಟಕವು ಕಲ್ಯಾಣನರ್ಮನಿಗೆ ರಾಜ್ಯ ಪ್ರಾಪ್ತಿ ಮತ್ತು. ಕೀಶ್ರಿಮುತಿಯ ಸಮಾಗಮಗಳಿಂದ ಮುಕ್ತಾಯ ವಾಗುತ್ತದೆ:

ನಾಟಕಕಾರಳ ಮೇಲೆ ಕಾಲಿದಾಸ, ಹರ್ಷ ಮತ್ತು ವಿಶಾಖ ದತ್ತರ ನಾಟಕಗಳ ಪ್ರಭಾವವು ವಿಶೇಷವಾಗಿ ಕಂಡುಬರುತ್ತದೆ. ಕಲ್ಯಾಣನರ್ಮನು ಗುರುಗಳ ಆಶ್ರಮದಿಂದ ಹೊರಡುವಾಗಿನ ವರ್ಸನೆಯು ಶಕುಂತಲೆಯು ಆಶ್ರಮ ಬಿಡುವಾಗಿನ ವಕ್ಷನೆಯನ್ನು ಹೋಲುತ್ತದೆ. ನಾಯಕ ನಾಯಿಕೆಯರ ಪ್ರಥಮ ದರ್ಶನದ ದೃಶ್ಯವು ಸಾಮಾನ್ಯವಾಗಿ ಕಾಲಿದಾಸನ ಮಾದರಿಯನ್ನೇ ಅನುಸರಿಸಿದೆ. ಅದರೆ ಅಮರ ಕವಿಯ ಜಾಣ್ಮೆಯ ಅನುಕರಣೆಯು ಕೂಡ ದುಷ್ಕರವಾದ ಕೆಲಸ. ಕೇನಲ ನಾಯಕ ನಾಯಿಕೆ ಮತ್ತು ಗೆಳತಿ, ಯರನ್ನು ಮಾತ್ರ ಪರಸ್ಪರ ಪರಿಚಯಕ್ಕೆ ಒದಗಿಸದೆ ವೃದ್ಧ ಕಂಚುಕಿಯನ್ನು ಕನಯಿತ್ರಿ ಅಲ್ಲಿರಿಸಿದ್ದಾಳೆ. ನಾಯಕನು ನೇರ

ಸಂಸ್ಕೃತ ಕವಯಿತ್ರಿಯರು ತಿ8

ವಾಗಿಯೇ ನಾಯಕಿಯ ಕುಲಗೋತ್ರಗಳನ್ನು ವಿಚಾರಿಸುತ್ತಾನೆ. ಬಲಭುಜ ಹಾರುನದು, ಸೀರೆಯ ಸೆರಗು ಬಳ್ಳಿಗೆ ಸಿಗುವದು ಇತ್ಯಾದಿಗಳು ನಮ್ಮ ಕವಯಿತ್ರಿಯ ಕಾಲದಷ್ಟೊತ್ತಿಗೆ ಪ್ರೇಮದ ಕಥಾವಸ್ತುವುಳ್ಳ ಸಂಸ್ಕೃತ ನಾಟಕಗಳಲ್ಲಿ ಅವಶ್ಯವಾಗಿ ಬರಬೇಕಾದ ಸಂಗತಿಗಳಾಗಿಬಿಟ್ಟರಸೇಕು. ಉದ್ಯಾನಶರೀಷಪೇಶಲವಾದ ಶರೀರವು ಅಡವಿಯಲ್ಲಿರುವದು ಯೋಗ್ಯವಲ್ಲ.” ಕೀರ್ತಿಮತಿಯು ಬ್ರಹ್ಮನ ಸೃಷ್ಟಿಯಲ್ಲ”“ಇದು ಸ್ವಪ್ನವೋ ಮಾಯೆಯೋ”“ವಾಗರ್ಥ ಗಳಂತೆ ಇವರಿಬ್ಬರನ್ನು ಕೂಡಿಸುನೆನು;” ಶೈಲೇಯಗಂಧಿನಿ ಶಿಲಾತಲೇ ಇತ್ಯಾದಿಯಾಗಿ ಆನೇಕ ಕಡೆಗೆ ಕಲ್ಪನೆಯಲ್ಲಿಯೂ ಮಾತಿನಲ್ಲಿಯೂ ಕಾಳಿದಾಸನ ಅನುಕರಣೆಯೂ ಪ್ರಭಾವವೂ ಸ್ಪಷ್ಟವಾಗಿ ಸಂಡುಬರುತ್ತವೆ. ನಾಯಿಕೆ ಚಿತ್ರವನ್ನು ಬರೆಯು ವದು, ಅದನ್ನು ಕಳೆದುಕೊಳ್ಳುವದು, ನಾಯಿಕೆ ದೇವತೆಯ ದರ್ಶನಕ್ಕೆ ಬಂದಾಗ ನಾಯಕ-ನಾಯಿಕೆಯರ ಪ್ರಥಮ ದರ್ಶನ ವಾಗುವದು ಇತ್ಯಾದಿ ಕೆಲವಂಶಗಳಲ್ಲಿ ಶ್ರೀಹರ್ಷನ ರತ್ನಾವಳಿ ಮುತ್ತು ನಾಗಾನಂದ ನಾಟಕಗಳ ಆರಂಭ ಭಾಗಗಳ ಪ್ರಭಾವವು ಕಂಡುಬರುವದು. ರಾಜಕೀಯ ಘಟನೆಗಳ ಚಿತ್ರಣದಲ್ಲಿ ವಿಶಾಖ ದತ್ತನ ಮುದ್ರಾರಾಕ್ಷಸದ ಪ್ರಭಾವವೂ ಒಡೆದುಕಾಣುವದು. ವೇಷ ಧಾರಿಗಳೊಡನೆ ಸಂದೇಶಗಳನ್ನು ಕಳಿಸುವದು ಜನಾಭಿಪ್ರಾಯ ವನ್ನು ಅಳೆದುನೋಡುವದು ಹಾಸ ಜನರಲ್ಲಿ ಶತ್ರುಗಳ ವಿಷಯ ಲ್ಲ. ಅಪ್ರೀತಿಯನ್ನು ಹೆಟ್ಟಸುವದು ಇವೇ ಮೊದಲಾದ ಕ್ರಮ ಗಳನ್ನು ಕೌಶಲ್ಯದಿಂದ ಅನುಸರಿಸಲಾಗಿದೆ. ಮಂತ್ರಗುಪ್ತನು ಆಮಾತ್ಯರಾಕ್ಟಸನಲ್ಲಿರುನ ಸ್ವಾಮಿಭಕ್ತಿ ಮತ್ತು ಉದಾರಹೃದಯ ವನ್ನು ಪಡೆದಿರುವನು. ಚಾಣಕ್ಯನ ನೀತಿಕುಶಲತೆಯೊ ಅವನಲ್ಲಿದೆ. ಅನನ. ಸಮೀಪದ ಸೇನಕರಲ್ಲಿಯೇ ಒಬ್ಬನಿಗೆ ತಿಳಿದ ಗುಟ್ಟು

ಶಿರ ಸಂಸ್ಕೃತ ಕವಯಿತ್ರಿಯರು

ಇನ್ನೊಬ್ಬನಿಗೆ ತಿಳಿದಿರುವದಿಲ್ಲ. ರಾಜಕೀಯ ರಹಸ್ಯಗಳನ್ನು ಕಾಪಾಡುವದರಲ್ಲಿ ಅವನು ಅಷ್ಟೊಂದು ದಕ್ಬತೆಯನ್ನು ತೋರಿಸು ವನು. ಅವನ ನೀತಿ ಪ್ರಯೋಗಗಳು ಅಮಾತ್ಯರಾಕ್ಟೃಸನಂತೆ ಕಾಲತಪ್ಪಿ ಮಾಡಿದವುಗಳಲ್ಲ. ಕೌಮುದೀ ಮಹೋತ್ಸವದ ಕಲ್ಪನೆ ಯನ್ನು 'ಹುದ್ರಾರಾಕೃಸ ಸದಿಂದಲೇ ತೆಗೆದುಕೊಂಡಂತಿದೆ. ಚಾರರು ಇಲ್ಲಿ ಪಾಶುಪತ ವೇಷದಲ್ಲಿರುವರು. ಮುದ್ರಾರಾಕ್ಸಸ ದಂತೆ ಅರ್ಹತರ ವೇಷದಲ್ಲಿರುವದಿಲ್ಲ. ಪರಿವ್ರಾಜಿಕೆ ಯೋಗ ಸಿದ್ಧಿ ಯು ಭವಭೂತಿಯ ಮಾಲತೀಮಾಧವದಲ್ಲಿಯ ಕಾಮಂದಕಿ ಯನ್ನು ನೆನಪಿಗೆ ತರುವಳು. ಭಾಸನ ಅವಿಮಾರಕ ನಾಟ ಕದ ಕಥೆಯು ಇಲ್ಲಿ ಉಲ್ಲೇಖಿಸಲ್ಪಟ್ಟಿದೆ. ಹಾಸಕಾ ಗಳಂತೆ“ ಪ್ರಸ್ತಾವನಾ” ಎನ್ನುವದರ. ಸ್ಥಾಪನಾ" ಎಂದಿದೆ. ನಾದ್ಯಂತೇ ತತಃ ಪ್ರವಿಶತಿ ಸೂತ್ರಧಾರಃ ನಿಂಬುದು ಮಂಗಲಕ್ಕಿಂತ ಮೊದಲೇ ಬಂದಿದೆ. « ಬಂಕಚ್ಛೀಡ್ಯೈ ರಂಧಕಾರ ಪಟಲೈಃ ಎಂಬುದು ಮೃಚ್ಛಕಟಕದ (ಸೂಚೇಭೇದ್ಯವ್‌ ತಮಃ” ಎಂಬುದನ್ನು ಹೋಲುತ್ತದೆ. ಹೀಗೆ ನಾಟಕಕಾರಳು ತನಗೆ ಉಪ ಬಬ್ಬವಿದ್ದ ಎಲ್ಲ ಉತ್ತಮ ಕೃತಿಗಳಲ್ಲಿಯ ಉತ್ತಮ ಅಂಶಗಳನ್ನು ತೆಗೆದುಕೊಂಡು ಕೇನಲ ಅನುಕರಣೆ ಎನಿಸದಂತೆ ಅವುಗಳನ್ನು ಪ್ರಕೃತ ಕಥಾವಸ್ತು ವಿಗೆ ಹೊಂದಿಸಿಕೊಂಡು ಸೊಗಸಾದ ನಾಟಕ ವನ್ನು ಬರೆದಿದ್ದಾಳೆ.

ಪಾತ್ರಗಳ ರಚನೆಯೂ ತುಂಬ ಆಕರ್ಷಕವಾಗಿದೆ. ಸುಂದರ ವರ್ಮ ಹಾಗೂ ಕಲ್ಯಾಣನರ್ಮರು ಐತಿಹಾಸಿಕ: ವ್ಯಕ್ತಿಗಳೇ ಎಂಬುದನ್ನು ಅರಿತುಕೊಳ್ಳಲು ನಮಗೆ ಯಾವ ಸಾಧನಗಳೂ ಇಲ್ಲ. ಚಂಡಸೇನನು ಯಾರು ಎಂಬುದೂ ತಿಳಿದುಬರುವದಿಲ್ಲ. ಬಗ್ಗೆ ವಿದ್ವಾಂಸರು ಮಾಡಿದ ಊಹೆಗಳು ಪ್ರಮಾಣಾಂತರಗಳಿಂದ

ಸಂಸ್ಕೃತ ಕವಯಿತ್ರಿಯರು ೨೯

ಬಲಪಟ್ಟಿಲ್ಲ. ಇನ್ನುಳಿದ ಪಾತ್ರಗಳಂತೂ ಕಾಲ್ಪನಿಕವೆಂಬುದು ಸ್ಪಷ್ಟವೇ ಆಗಿದೆ. ಅನೆಲ್ಲ ಕಥೆಯ ಬೆಳವಣಿಗೆಗೆ ಮತ್ತು ರಂಗ ಪೋಷಣೆಗೆ ಅನುಕೂಲವಾಗಿವೆ. ಅವುಗಳಿಗೆ ಕೊಟ್ಟ ಹೆಸರುಗಳೂ ಸಮರ್ಪಕವಾಗಿವೆ. ಸಂತೋಷದ ಸುದ್ದಿಯನ್ನು ತಂದ ಸೇವಕ "ನಂದಕ'. ಪರಸ್ಪರ ಭೆಟ್ಟಿಯಾಗುವ ಸಂದರ್ಭದಲ್ಲಿ ಬಂದವನು (ಸಂಗತಕ'. ಸೇನಾಪತಿಗಳು "ಕುಂಜರಕ” ಮತ್ತು «ಸಿಂಹಲಕ'ರು. ಜನಾಭಿಪ್ರಾಯವನ್ನು ತಿಳಿದುಕೊಳ್ಳಲು ನಿಯಮಿಸಿದ ಗೂಢ ಚಾರನು ಲೋಕಾಕ್ಟಿ ಅವನಿಗೆ ಅಕ್ಷದಾಸನೆಂಬ ಪದನಿಯಿದೆ, ಅವನ ಗೆಳೆಯ ವೇಶರಕ್ಷಿತ. ವಿದೂಷಕನು ಕ್ರಮದಂತೆ ಹಾಸ್ಯ ಪಾತ್ರಕ್ಕೂ ನಮ್ರ ಸಚಿವನೂ ಆಗಿದ್ದರೂ ಅವನಾಡುವ ಹಾಸ್ಯದ ಮಾತುಗಳಲ್ಲಿ ಒನ್ಮೊಮ್ಮೆ ದೊಡ್ಡ ಅನುಭವಗಳು ಅಡಗಿರುತ್ತವೆ. ರಾಜ್ಯವು ತಿರುಗಿ ದೊರೆತಮೇಲೆ ರಾಜಕುಮಾರನು ನಾಯಕಿಯ ಬಗ್ಗೆ ಚಿಂತಿಸುತ್ತಿದ್ದಾಗ ಅವನಿಗೆ ದೊಡ್ಡದೊಂದು ರಾಜಕೀಯ ರಹಸ್ಯವು ಹೊಳೆಯುವದು. “ವಯಸ್ಯ ಏಕಮ್‌ ರಾಜಕಾರ್ಯೆಮ್‌ ಮಂತ್ರಯಾಮಿ” ಗೆಳೆಯ ಒಂದು ರಾಜಕಾರ್ಯವನ್ನು ಹೇಳುವೆನು ಎಂದು ಗಂಭೀರವಾಗಿ ಆರಂಭಿಸುವನು. ಅವನು ಹೇಳುವ ರಾಜ ಕಾರ್ಯವಿಷ್ಟೇ 4 ಅಶಿತ್ವಾ ಪೀತ್ವಾ ತಿಷ್ಕತಾಮ್‌ ಕಿಮ್‌ ತೇನ ಅತಿಕ್ರಾಂತೇನ ಸ್ತ್ರೀವೃತ್ತಾಂತೇನ ತಿಂದು ಕುಡಿದು ಸುಖ ವಾಗಿರು; ಹೆಣ್ಣಿನ ಸುದ್ದಿ ಹಾಳಾಗಲಿ ಎನ್ನುವದೇ ಅವನು ಕಂಡ ರಹಸ್ಯ. ನೀನು ರಾಜನಾದಾಗ ಹಾಗೆ ಮಾಡು ಎಂದು ಫಿಪುಣಿಕೆ ಹೇಳಿದಾಗ ಕೀರ್ತಿಮತಿಯೊಡನೆ ನಾವೂ ನಗುನೆನು. ನಾಟಕದಲ್ಲಿ ಶೃಂಗಾರವು ಮುಖ್ಯರಸವಾಗಿದೆ. ವೀರರಸವು ಅಂಗರಸವಾಗಿದೆ. ಪಂಚಸಂಧಿಗಳೂ, ಸಂಧ್ಯಂಗಗಳೂ ಯಥೋ ಚಿತವಾಗಿ ಬೆಳೆದು ಬಂದಿವೆ. ಪದ್ಯಗಳ ಸಂಖ್ಯೆ ಬೇಸರೆ

ತ್ಲಿಂ ಸಂಸ್ಕೃತ ಕವಯಿತ್ರಿಯರು

ಬರುವಷ್ಟು ಅಧಿಕವಾಗಿಲ್ಲ. ಸಂಭಾಷಣೆಗಳು ಚುರುಕಾಗಿನೆ. ಪ್ರಾಸಂಗಿಕವಾದ ಯಾವದೇ ದೃಶ್ಯವೂ ಬೇಸರ ತರುವಷ್ಟು ಬೆಳೆ ದಿಲ್ಲ. ಪಾತ್ರಗಳ ಪ್ರವೇಶವೂ, ನಿರ್ಗಮನವೂ ಆಕಸ್ಮಿಕನೆನಿಸು ವದಿಲ್ಲ. ನಾಟಕದ ಕೊನೆಯು ಮಾತ್ರ ಸಾಂಪ್ರದಾಯಿಕ ವಾಗಿರುವದಿಲ್ಲ. ಕೊನೆಗೆ ಭರತನಾಕ್ಯನಿರುವದಿಲ್ಲ. ರಾಜ್ಯ ಪ್ರಾಪ್ತಿಗೂ ಕೀರ್ರಿಮತಿಯ ಪ್ರಾಪ್ತಿಗೂ ಕಾರಣರಾದ ಮಂತ್ರ ಗುಪ್ತ, ಯೋಗಸಿದ್ಧಿಯರು ಅಲ್ಲಿರುವದಿಲ್ಲ. ಕೇವಲ ಪ್ರಮದವನ ದಲ್ಲಿ ನಾಯಕ ನಾಯಿಕೆಯರು ಭೆಟ್ಟಿಯಾಗುವರೇ ಹೊರತು ಪಟ್ಟಾಭಿಸೇಕ ಮತ್ತು ವಿನಾಹೆಗಳಲ್ಲಿ ಕಥೆ ಪರ್ಯವಸಾನವಾದ ಸೂಚನೆಯಿಲ್ಲ. ನಾಟಕಕ್ಕೆ ಕೌಮುದಿ ಮುಹೋತ್ಸನವವೆಂಬ ಹೆಸರು ಸಂಪಾದಕರು ಕೊಟ್ಟ ಹೆಸರಾಗಿದೆ. ಅಂಕಗಳ ಕೊನೆಗಾಗಲೀ ಗ್ರಂಥದ ಕೊನೆಗಾಗಲೀ ಹಸ್ತಪ್ರತಿಯಲ್ಲಿ ಹೆಸರು ನಿರ್ದಿಷ್ಟ ವಾಗಿಲ್ಲ. ಪ್ರಸ್ತಾವನೆಯಲ್ಲಿ ನಾಟಕದ ಹೆಸರು ಬರಬೇಕಾದ ಸ್ಸ ಳದಲ್ಲಿ “ಅಸ್ಕೈನ ರಾಜ್ಞಃ ಸಮತೀತಮ್‌ ಚರಿತಮ್‌ ಅಧಿಕೃತ್ಯ” ಎಂದಿದೆ. ನಾಟಕವನ್ನು ಆಡುವ ಸಂದರ್ಭವು ಮಾತ್ರ ಕೌಮುದಿ ಮಹೋತ್ಸವದ ಸಂದರ್ಭ ಎಂದಿದೆ. ಇದರಿಂದ ನಾಟಕದ ಹೆಸರೇ ಅನಿರ್ದಿಷ್ಟವಾಗಿ ಉಳಿದಿದೆ. ಅದು ಏನೇ ಇದ್ದರೂ ಸಂಪಾದಕರು ಕೊಟ್ಟ ಹೆಸರು ಆಕರ್ಷಕವಾಗಿದೆ.

ಅಲ್ಲಲ್ಲಿ ಬರುವ ಅನೇಕ ಮಾತುಗಳಿಂದ ಕನಯಿತ್ರಿಯೆ ಲೋಕಾನುಭನವೂ ಮಾತಿನ ಜಾಣ್ಮೆಯೂ ತಿಳಿದುಬರುತ್ತವೆ. 4 ರಂಗಭೂಮಿಗೆ ಬಂದಾಗ ಪಾತ್ರದ ಮಾತುಗಳಂತೆ ರಾಜನೀತಿಯು ಪ್ರಸಂಗ ಬಂದಾಗ ತಡವರಿಸುತ್ತದೆ.” ಶಿಕ್ಷಣದಿಂದ ಬುದ್ಧಿನಂತನ ಮಾತು ಹೇಗೋ ಹಾಗೆ ತಾರುಣ್ಯದಿಂದ ಯುವತಿಯರು ಶೋಭಿ ಸುತ್ತಾರೆ.” " ನೆರಳು ಬಿಸಿಲನ್ನು ಬೆನ್ನುಹೆತ್ತುನಂತೆ ವಿಪತ್ತುಗಳು

ಸಂಸ್ಕೃತ ಕನಯಿತ್ರಿಯರೆ

ತೇಜಸ್ವಿಯ ಬೆನ್ನುಹತ್ತುತ್ತವೆ. ? ಪ್ರಮಾದದ ಅಂಜಿಕೆಯಿಂದ ವಿವೇಕಿಗಳ ಕಾರ್ಯಸಿದ್ಧಿಯು ತಡವಾಗಿ ಫಲಿಸುತ್ತದೆ.” ಇತ್ಯಾದಿ ಯಾಗಿ ಅನುಭನದ ಮಾತುಗಳು ನಾಟಕದ ತುಂಬೆಲ್ಲ ಕಂಡು ಬರುತ್ತವೆ. ನಾಟಕದಂತೆಯೇ ವಿಜ್ಞಿಕೆಯನೆಂದು ಪ್ರಸಿದ್ಧವಾದ ೩೦ ಬಿಡಿ ಪದ್ಯಗಳೂ ತುಂಬ ಆಕರ್ಷಕವಾಗಿವೆ. ಅವು ಯತು, ಸೂರ್ಯೋ ದಯ, ಗಿಡ್ಕ ಹೊವು, ಬೀಸುಕುಟ್ಟುವ ಹಾಡು, ಸ್ತ್ರೀಸ್ವಭಾವ, ಕವಿಪ್ರಶಂಸೆ ಇತ್ಯಾದಿ ವಿಷಯಗಳನ್ನೂಳಗೊಂಡಿವೆ. ಕವೇರೆಭಿಪ್ರಾಯನು ಶಬ್ದ ಗೋಚರಮ್‌ | ಸ್ಪುರಂತಮಾರ್ದ್ರ್ರೇಷು ಪದೇಷು ಕೋಮಲಮು ಸ್ಫುರದ್ಧಿರಂಗೈಃ ಕೃತಳೋನಂವಿಕ್ರಿಯ್ಕೆಃ | ಜನಸ್ಮ ತೂಷಪ್ಲೀವರ್‌ ಭನತೋಯೆ ಮಂಜಲಿಃ ಎಂಬ ಪದ್ಯದಲ್ಲಿ ವಿಜ್ಞಿಕೆಯು ಸುಕವಿಗಳ ಕಾವ್ಯಗಳಲ್ಲಿಯ ಧ್ವನಿಯನ್ನು ವಿಕಾಗ್ರಚಿತ್ತದಿಂದ ಆಸ್ವಾದಿಸುವ ಸಹೃದಯ ರಿಗೆ ತನ್ನ ಗೌರವವನ್ನು ವೃಕ್ತಪಡಿಸಿದ್ದಾಳೆ. ಓದುಗರ ಸಹೃದಯ ತೆಯ ಬೆಲೆ ಅವಳಿಗೆ ಚೆನ್ನಾಗಿ ಗೊತ್ತು. ಇನ್ನೊಂದು ಪದ್ಯ ದಲ್ಲಿ “ಒಂದು ಕಾಲದಲ್ಲಿ ಮದ್ದಾ ನೆ ತಿರುಗಾಡಿದರೂ ಕಲಕದ ಕರೆಯ ನೀರಲ್ಲಿ ಇಂದು ಒಂದು ನೀರುಗೋಳಿ ಹೆಜ್ಜೆ ಇಟ್ಟರೂ ಕೆಸರಾಗುತ್ತದೆ, ?' ಎಂದು, ಒಂದು ಕಾಲದಲ್ಲಿ ಐಶ್ವರ್ಯವಂತ ನಾಗಿದ್ದು ಮದ್ದಾನೆಯಂಥ ಅತಿಥಿಗಳ ಭಾರವನ್ನು ತಡೆದವನು ಇಂದು ಅಲ್ಬದಾನನನ್ನು ಕೊಡಲು ಅಸಮರ್ಥನೆಂಬುವದನ್ನು ಅನ್ಯೋಕ್ತಿಯಿಂದ ಸುಂದರವಾಗಿ ಸೂಚಿಸಿದ್ದಾಳೆ. ದೃಷ್ಟಿಮ್‌ ಹೇ ಪ್ರತಿನೇಶಿನಿ ಕ್ಷಣಮಿಹಾಷ್ಯಸ್ಮದ್ಧೃಹೇ ದಾಸ್ಯಸಿ | ಪ್ರಾಯೇಣಾಸ್ಕ ಶಿಶೋಃ ಪಿತಾ ವಿರಸಾಃ ಕಾಪೀರಪಃ ಪಾಶ್ಯತಿ |

4೨ ಸಂಸ್ಕೃತ ಕವಯಿತ್ರಿಯರು

ಏಕಾಕಿನ್ಮಪಿ ಯಾಮಿ ಸತ್ವರಮಿತಃ ಸ್ರೋತಃ ತಮಾಲಾಕುಲಮ್‌ |

ನೀರೆಂಧ್ರಾಸ್ತ ನುಮಾಲಿಖಂತು ಜರಠಚ್ಛೀದಾನಲಗ್ರಂಥೆಯಃ

ನೆಕೆಮನೆಯವಳೇ ನಮ್ಮ ಮನೆಯೆ ಕಡೆಗೆ ತುಸು ನೋಡಿ ಕೊಂಡಿರು. ನನ್ನ ಮಗುವಿನ ತಂದೆ ಬಾವಿಯ ಸವಳು ನೀರು ಕುಡಿಯುವದಿಲ್ಲ. ಆದುದರಿಂದ ಒಬ್ಬಂಟಗಳಾದರೂ ಚಿಂತೆಯಿಲ್ಲ. ಹೆಳ್ಳಕ್ಕೆ ಹೋಗುವೆನು. ಅಲ್ಲಿ ತಮಾಲಗಿಡಗಳ ಕತ್ತಲಿದೆ. ಮುಳ್ಳು ಮೈಗೆ ಚುಚ್ಚಲಿ. ಬೇಗನೇ ಹೋಗಿಬರುನೆನು. ಎಂಬ ಪದ್ಯದಲ್ಲಿ ಅಸತಿಯು ಸಂಕೇತಸ್ಥಾನಕ್ಕೆ ಹೋಗುವದೂ ನಖಕ್ಷತಾದಿಗಳೂ ಸೂಚಿತವಾಗಿವೆ. ಭತ್ತ ಕುಟ್ಟುವ ವರ್ಣನೆ ಇನ್ನೊಂದು ಪದ್ಯ ದಲ್ಲಿ ಸೊಗಸಾಗಿದೆ“ ವಿಲಾಸದಿಂದ ಒನಕೆಯನ್ನು ಮೇಲಕ್ಕೆ ತ್ತುವ ಪುಷ್ಟವಾದ ತೋಳುಗಳ ಚಲನೆಗನುಸರಿಸಿ ಮೇಲೆ ಕಳಗೆ ಸರಿಯುವ ಬಳೆಗಳ ನಿನಾದ ಮತ್ತು ವಿಶಾಲವಾದ ಉರಃಸ್ಥಲಗಳ ಏರಿಳಿತಗಳಿಗನುಸರಿಸಿ ಬರುವ ಹುಂಕಾರಗಳೆಂಬ ಪಕ್ಕವಾದ್ಯ ಗಳಿಂದ ಕೂಡಿದ ಭತ್ತ ಕುಟ್ಟುವ ಹಾಡುಗಳು ಮನಸ್ಸನ್ನು ಸೆಳೆ ಯುತ್ತವೆ. ಅಸ್ಥಿರ ಮನೇಕರಾಗಮ್‌ ಗುಣರಹಿತಮ್‌ ನಿತ್ಯವಕ್ರ ದುಸ್ರಾಪಮ್‌ | ಪ್ರಾವೃಷಿ ಸುರೇಂದ್ರಚಾಸಮ್‌ ವಿಭಾವೃತೇ ಯುವಶಿ ಚಿತ್ತ ಮಿವ 1

ಎಂಬ ಪದ್ಯದಲ್ಲಿ ಯುವತಿಯರ ಮನಸ್ಸನ್ನು ಕಾಮನ ಬಿಲ್ಲಿಗೆ ಹೋಲಿಸಿದ್ದು ತುಂಬ ಮಾರ್ಮಿಕವಾಗಿದೆ. ಯೋಗ್ಯತಾವಂತನಾದ ಕನಿ ಅಥವಾ ವಿದ್ವಾಂಸನು ಯೋಗ್ಯತೆಯನ್ನರಿಯದನನ ಆಶ್ರಯ ದಲ್ಲಿದ್ದು ದುರ್ಲಕ್ಷಿಸಲ್ಪಟ್ಟಿರುವನು. ಎಂಬಂಶವನ್ನು ಸಂಪಿಗೆ ಮರವೆ ಹಾಳು ಹಳ್ಳಿಯ ಮೂರ್ಬನ ಮನೆಯಂಗಳದಲ್ಲಿ ನಿನ್ನನ್ನು ಯಾರೋ ಹೆಚ್ಚಿರುವರಲ್ಲ. ಇಲ್ಲಿ ಹುಟ್ಟಿ ಕೊಳ್ಳುತ್ತಿರುವ ಗಿಡಗಂಟಗಳ ಮೇಲೆಯೇ ಲೋಭವು ಹೆಚ್ಚಾಗಿ ಅಲಕ್ಷಿಸಲ್ಪಟ್ಟ

ಸಂಸ್ಕೃತ ಕವಯಿತ್ರಿಯರು ಪಿ

ನಿನ್ನ ಎಲೆಗಳೆಲ್ಲ ಹಾಳು ತೋಟಗಳಲ್ಲಿದ್ದಂತಾಗಿವೆ?” ಎಂಬ ಚಂಸಕಾನ್ಯೋಕ್ತಿಯಲ್ಲಿ ಅರ್ಥನತ್ತಾಗಿ ಚಿತ್ರಿಸಿರುವಳು. “ಕಾಮನೇ ನಿನ್ನನ್ನು ಶಿನನು ಮೊದಲು 'ಜಯಿಸಿದನು. ಬಳಿಕ ಬುದ್ಧನು ಸೋಲಿಸಿದನು. ನನ್ನನ್ನು ಬಿಟ್ಟು ಪ್ರವಾಸದಲ್ಲಿರುವ ನನ್ನ ಕಾಂತನೂ ನಿನ್ನನ್ನು ಜಯಿಸಿರುವನು. ಅವರೆಲ್ಲರನ್ನು ಬಿಟ್ಟು ಅಬಲೆಯಾದ ನನ್ನನ್ನು ಹಿಂಸಿಸುವಿಯಲ್ಲ! ಅದುದರಿಂದ ಧಿಕ ತ್ವಾಮ್‌ ಧಿಕ್‌ ತವ ಪೌರುಷಮ್‌ ಧಿಗುದಯವರ್‌ ಧಿಕ್‌ ಕಾರ್ಮುಕಮ್‌ ಧಿಕ” ಶರಾನ್‌” ಎಂದು ವಿರಹಿಣಿಯ ವೃಥೆ ಯನ್ನು ಮನಸ್ಸು, ಕರಗುವಂತೆ ಚಿತ್ರಿಸಿರುವಳು. ಕವಯಿತ್ರಿ ವಿಜ್ಞಿಕೆಯು ಜೀವನದಲ್ಲಿಯ ಸೊಗಸನ್ನು ಅರಿತಂತೆ ಕಹಿಯನ್ನೂ ತಿಳಿದವಳಾಗಿದ್ದಳು. « ವಿಧಿಯು ಚಿಂತೆ ಎಂಬ ಚಕ್ರದಮೇಲೆ ನಮ್ಮ ಮನಸ್ಸನ್ನು ಮಣ್ಣು ಮುದ್ದೆಯಂತಿಟ್ಟು ತಿರುಗಿಸುವನು. ಅವನು ಏನು ಮಾಡಬೇಕೆಂದಿರುವನೋ ಯಾರಿಗೆ ಗೊತ್ತು? ಎಂದು ದೈವದ ಅಗಾಧತೆಯನ್ನು ವಿನರಿಸುವಳು. ಹೀಗೆ ಭಾನ ನಿರೂಪಣೆ . ಮತ್ತು ಚಿತ್ತಾಕರ್ಷಣೆಯಲ್ಲಿ ಉನ್ನತ ಮಟ್ಟದ ಸುಮಾರು ಮೂವತ್ತೆರಡು ಬಿಡಿಪದ್ಯಗಳು ವಿಜ್ಞಿಕೆಯ ಪದ್ಯಗಳೆಂದು ಸುಭಾ. ಹಿತ ಗ್ರಂಥಗಳಲ್ಲಿಯೂ ಅಲಂಕಾರ ಗ್ರಂಥಗಳಲ್ಲಿಯೂ ಉಲ್ಲೇಖಿ. ಸಲ್ಪಟ್ಟರುವವು. ಇವಳ ಪದ್ಯಗಳನ್ನು ಓದಿದ ಮೇಲೆ * ಯಾ ವೈದರ್ಭಗಿರಾವರ್‌ ವಾಸಃ ಕಾಲಿದಾಸಾದನಂತರಮ್‌ * ಎಂದು- ರಾಜಶೇಖರನು ಇವಳನ್ನು ಹೊಗಳಿದ್ದು ಸಾರ್ಥಕವೆಂದು ಮನ ದಟ್ಟಾಗುವದು. ಇವಳು ಯಾರು ಎಂಬ ಬಗ್ಗೆ ಕೊನೆಯ ನಿರ್ಣಯ ವನ್ನು ಹೇಳುವದು ದುಷ್ಕರವಾಗಿದ್ದರೂ ಕರ್ನಾಟಕ ದೇಶದವಳು ಎಂದು ಮಾತ್ರ ಖಂಡಿತವಾಗಿ ಹೇಳಬಹುಡಾದ್ದರಿಂದ ನಮ್ಮ ಆದ ರಾಭಿಮಾನಗಳು ಉಕ್ಕಿಬರುವವು.

ಗಂಗಾದೇವಿ

ಸಂಸ್ಕೃತ ಕವಯಿತ್ರಿಯರಲ್ಲಿ ಇನ್ನೋರ್ವ ರಸಿಕಳಾದ ಕನಯಿ ಕ್ರಿಯೆ ವಿಜಯೆನಗರದೆ ಗಂಗಾದೇವಿಯ. ಗಂಗಾದೇವಿಯ ಬುಕ್ಕರಾಯನ ಸೊಸೆ. ಹಿರಿಯ ಕಂಪಣನ ಹೆಂಡತಿ. ಇವಳು ತನ್ನ ಪತಿ ಕಂಪಣರಾಯನು ತಂಸೆಯ ಆಜ್ಞೆ ಯಂತೆ ದಕ್ಷಿಣ ದೇಶಕ್ಕೆ ದಂಡೆತ್ತಿ ಹೋಗಿ ವನ್ಯರಾಜರನ್ನೂ, ರಾಜಗಂಭೀರ ( ಪಡವೀಡು ) ದುರ್ಗದಲ್ಲಿದ್ದ ಚಂಪರಾಯ ( ಸಂಭವರಾಯ ) ನನ್ನೂ, ಮಧುರೆಯ ಮುಸಲ್ಮಾನರನ್ನೂ ಸೋಲಿಸಿದ ಘಟನೆ ಗಳನ್ನು ವರ್ಣಿಸಿ ಮಧುರಾವಿಜಯಮ್‌ ಅಥವಾ ವೀರ ಕಂಪಣರಾಯಚರಿತಮ್‌ ಎಂಬ ಕಾವ್ಯವನ್ನು ಬರೆದಿದ್ದಾಳೆ. ಕಾವ್ಯದಲ್ಲಿ ಉಲ್ಲೇಖಿಸಿದ ಘಟನೆಗಳು ಕ್ರಿ. ಶ. ೧೩೬೦ರಿಂದ ೧೭.೭೧ ಕಾಲಾವಧಿಯಲ್ಲಿ ನಡೆದ ಘಟನೆಗಳಾಗಿವೆ. ಗ್ರಂಥದ ಸಮಗ್ರ ಪ್ರತಿಯು ದೊರೆಯುವದಿಲ್ಲ. ಮೊದಲಿನ ಐದು ಮತ್ತು ಏಳನೆಯ ಸರ್ಗಗಳು ಪೂರ್ಡವಾಗಿದ್ದು ಆರು, ಎಂಟು ಮತ್ತು ಎಂಟರ ಮುಂದಿನ ಸರ್ಗಗಳೆ ಕೆಲಭಾಗಗಳು ಮಾತ್ರ ದೊರೆತಿರುತ್ತವೆ. ಗಂಗಾದೇವಿಯ ದಂಡಯಾತ್ರೆಯ ಕಾಲದಲ್ಲಿ ಕಂಪಣನ ಜೊತೆಗಿದ್ದು ದಿಗ್ವಿಜಯವನ್ನು ಪ್ರತ್ಯಕ್ಟವಾಗಿ ನೋಡಿ ದಂತಯಾತ್ರೆಯು ನಡೆಯುತ್ತಿದ್ದಂತೆಯೇ ಅಥವಾ ಮುಗಿದ ಕೆಲ ದಿನಗಳಲ್ಲಿಯೇ ಕಾವ್ಯವನ್ನು ಬರೆದಂತಿದೆ.

ಕಾವ್ಯದ ಆರಂಭದಲ್ಲಿ ಕನಯಿತ್ರಿಯು ದೇವತಾವಂದನೆಯ ನಂತರ ಕಾಳಾಮುಖ ಸಂಪ್ರದಾಯದ ಕ್ರಿಯಾಶಕ್ತಿ ಆಚಾರ್ಯ ರಿಗೆ ನಮಸ್ಫರಿಸುವಳು. ವಾಲ್ಮೀಕಿ, ವ್ಯಾಸ, ಕಾಲಿದಾಸ,

ಸಂಸ್ಕೃತ ಕವೆಯಿತ್ರಿಯರು ೩೫

ಬಾಣಭಟ್ಟ, ಭಾರನಿ, ದಂಡಿ ಮತ್ತು ಭವಭೂತಿ ಇವರ ಕೃತಿಗಳ ಮಹಿಮೆಯನ್ನು ಹೊಗಳುವಳು. ದಾಸತಾವತ” ಕಾಲಿದಾಸಸ್ಕ ಕವಯ ಕೇನ ಬಿಭ್ರತೇ। ಇದಾನೀಮಸಿ ತಸ್ಕಾರ್ಥಾನ:ಪಜೀವಂತ್ಯಮೀ ಯತಃ

ಎಂಬ ಅವಳ ಗಾ ಮು ಅವಳಿಗೇ ಅನ್ವಯಿಸುವದು. ಕಾಲಿದಾಸನ ಪ್ರಭಾವ ೪ವಳೆ ಕಾವ್ಯದ ಮೇಲೆ ವಿಪ್ರೀ ವಾಗಿ", ಮೇಲೆ ಹೇಳಿದ ಅತಿ ತ್ರ ಸಿದ್ಧ ಕವಿಗಳನ್ನಲ್ಲದೆ ಕರ್ಣಾಮೃತ ಕವಿ, ತಿಕ್ಕಯ್ಯ ಅಗಸ್ತ್ಯ, ಗಂಗಾಧರಿಕವಿಗಳನ್ನಿ ಸ್ಮರಿಸುವಳು. ಅಗಸ್ತ್ಯನು ಎಪ್ಪತ್ತುನಾಲ್ಕು ಕಾವ್ಯಗಳನ್ನು ಬರೆದವನು ಎಂದು ಹೇಳುವಳು. ಗಂಗಾಧರನು ಭಾರತದ ಕಥೆಯನ್ನು ನಾಟಕ ರೂಪದಲ್ಲಿ ಬರೆದಿರು ವದನ್ನು ತಿಳಿಸುವಳು. ಕೊನೆಯದಾಗಿ ವಿಶ್ವನಾಥ ಕವಿಯನ್ನು ಹೊಗಳುತ್ತ ಅವನ ಕೃಪೆಯಿಂದ ತನಗೆ ಸಾರ್ವಜ್ಞ ವು ದೊರೆಯಿ ತೆಂದು ಹೇಳುವಳು. ಇದರಿಂದ ವಿಶ್ವನಾಥ ಕವಿಯು ಇವಳ ವಿದ್ಯಾ ಗುರುವಾಗಿರಬಹುದೆಂದು ಊಹಿಸಬಹುದಾಗಿದೆ. ಅಗಸ್ತ್ಯನು ವಿದ್ಯಾನಾಥನೆಂದು ಪ್ರಸಿದ್ಧನಾದ ಬಾಲಭಾರತ, ಪ್ರತಾಪರುದ್ರ ಯಶೋಭೂಷಣ ಮತ್ತು ಕೃಸ್ಣಚರಿತ ಮೊದಲಾದವುಗಳನ್ನು ಬರೆದ ಕವಿ, ಇವನು ವರಂಗಲ್ಲಿನ ಕಾಕತೀಯ ಅರಸು ಪ್ರತಾಪ ರುದ್ರನ ( ಕ್ರಿ.ಶ. ೧೨೯೪-೧೩೨೫ ) ಆಸ್ತಾನ ಕನಿಯಾಗಿದ್ದನು. ವಿಜಯನಗರದ ಸಂಗಮ, ಬುಕೃರೂ ಇವನಿಗೆ ಸೋಷಕರಾಗಿದ್ದರು. ಗಂಗಾಧರನು ಅಗಸ್ತ್ಯನ ತಂಗಿಯ ಮಗನು. ಗಂಗಾದೇವಿಯ ಗುರುವಾದ ವಿಶ್ವನಾಥನು ಗಂಗಾಧರನ ಮಗನು ಮತ್ತು ಅಗಸ್ತ್ಯನ ಶಿಷ್ಯನು. ತಿಕ್ಕಯನು ಬಹುಶಃ ಪ್ರಸಿದ್ಧ ತೆಲಗು ಕನಿ ತಿಕ್ಕಣ್ಣನಾಗಿರಬಹುದು. ಹೀಗೆ ಪ್ರಾಚೀನ ಕನಿಗಳನ್ನೂ ಮತ್ತು ತನಗೆ ಸಮಕಾಲೀನರೂ ತನ್ನ ಗುರುಪರಂಪರೆಗೆ ಸೇರಿದವರೂ

೩೬ ಸಂಸ್ಕೃತ ಕವೆಯಿತ್ರಿಯೆರು

ಆದ ಕನವಿಗಳನ್ನೂ ಹೊಗಳಿ ಕವಯಿತ್ರಿ ಗಂಗಾದೇನಿಯು ಕವಿ ಸಹೃದಯ ಮತ್ತು ಕಾವ್ಯಗಳ ಬಗ್ಗೆ ತವು ವಿಚಾರಪೂರ್ಲ ವಾದ ಮಾತುಗಳನ್ನು ಹೇಳುವಳು. ಕ್ವಚಿದರ್ಥಃ ಕ್ವಚಿಚ್ಛಬ್ದಃ ಕ್ವಚಿದ್ಭಾ ವಃ ಕ್ವಚಿದ್ರ ಸಃ | ಯತೆ ಕೊತ ಸಂತಿ Er ನಬ ವಿದ್ಯತೇ | ಕೆಲವು ಕೃತಿಗಳಲ್ಲಿ ಅರ್ಥನಿರೂಪಣೆ ಚನ್ನಾಗಿರುವದು. ಕೆಲವೆಜಿ ಶಬ್ದಯೋಜನೆ ಚನ್ನಾ ಗಿರುವದು. ಕೆಲವು ರಚನೆಗಳಲ್ಲಿ ಭಾವವೂ ರಸವೂ ಸೊಗಸಾಗಿರುವವು. ಆದರೆ ಇವೆಲ್ಲವೂ ಒಂದೆಡೆಗೆ ದೊರೆ ಯುವ ಕೃತಿಗಳು ದುರ್ಲಭ ಎಂಬ ಅವಳ ಮಾತು ಕಾವ್ಯರಚನೆ ಯಲ್ಲಿ ಅವಳಿಗಿರುವ ಹೊಣೆಗಾರಿಕೆಯ ಅರಿವನ್ನು ತೋರಿಸುತ್ತದೆ. ನಿರ್ದೋಷಾಪ್ಯಗುಣಾ ವಾಣೀ ವಿದ್ವಜ್ವನರಂಜಿನೀ | ಪತಿವ್ರತಾಪ್ಯರೂಪಾ ಸ್ತ್ರೀ ಪರಿಣೇತ್ರೇ ರೋಚತೇ W ಕಾವ್ಯದಲ್ಲಿ ಕೇವಲ ದೋಷಗಳಿಲ್ಲದಿದ್ದರೆ ಸಾಲದು: ಗುಣ ಗಳಿಲ್ಲದೆ ಅದು ವಿದ್ರಜ್ಞ ನರ ಮನಸ್ಸನ್ನು ಸೆಳೆಯಲಾರದು.. ಪತಿ ನಿಷ್ಕೆಯಾದರೂ ರೂಪವತಿಯಲ್ಲದವಳು ಗಂಡನ ಮನಸ್ಸನ್ನು ಆಿಕರ್ಷಿಸಲಾರಳು” ಎಂಬ ಅವಳ ಮಾತಿನಲ್ಲಿ ಕಾವ್ಯದ ಸತ್ಯಕ್ಕಿಂತ ಜೀವನದ ಸತ್ಯ ತುಂಬಿದೆ. ಪ್ರಾರ್ಥನೀಯಃ ಸತ್‌ಕಾವ್ಯಶ್ರುತ್ಮೈ ಸಹೃದಯೋ ಜನ? ಸ್ವಾದು ಪುಸ್ಪರಸಾಸ್ವಾದೇ ಕಃ ಪ್ರೇರೆಯತಿ ಸಟ್ಟದಮ್‌

“ಬಳ್ಳೆ ಯೆ ಕಾವ್ಯವನ್ನು 'ಜೇಳೆಲು ಸಹ್ಯೆ ಕೈದಯರನ್ನು ಕರೆದು ತರುವ ಅವಶ್ಯಕತೆಯಿಲ್ಲ. ಮಧುರವಾದೆ ' ಪನ್ನ ರಸವನ್ನು ಸೇವಿಸಲು ಭ್ರಮರಗಳನ್ನು ಯಾರು ಪ್ರ ಪ್ರಚೋದಿಸುವರು ಎಂಬ ಮಾತಿನಲ್ಲಿ ಕರಯಿತ್ರಿಗೆ ತನ್ನ ಕಾವ್ಯದ ಯೋಗ್ಯತೆಯ ಬಗೆಗಿರುನ`ಆತ್ಮವಿಶ್ವಾಸ

ಸಂಸ್ಕೃತ ಕವಯಿತ್ರಿಯರು ಪ್ಪ

ಮತ್ತು ಸಹೈದಯ ವಾಚಕರಲ್ಲಿರುವ ಆದರಗಳು ವ್ರಕ್ತವಾಗುತ್ತವೆ. ಆರಂಭದಲ್ಲಿ ಹೀಗೆ ಅನುಭವದ ಮತ್ತು ವಿವೇಕದ ` ಮಾತು ಗಳನ್ನು ಹೇಳಿ -. * ಸಮಸ್ತಸಾಮಂತಮಸ್ತಕನ್ಯಸ್ತಶಾಸನ” ನಾದ ಹರಿಹರನ ತಮ್ಮ ಬುಕ್ಕರಾಜನೆಂಬ ಅರಸನಿದ್ದನು ಎಂದು ಪ್ರೌಢವಾದ ರೀತಿಯಲ್ಲಿ ಕಾವ್ಯನಿರೂಪಣೆಗೆ ತೊಡಗುವಳು. ಬುಕ್ಳರಾಜನ ವರ್ಣನೆಯು ಸಾಮಾನ್ಯವಾಗಿ ಸಂಸ್ಕೃ ತೆ ಕಾವ್ಯು ಗಳಲ್ಲಿ ಬರುವ ಸಮ್ರಾಟರ ವರ್ಗ ನೆಯ ಧಾಟಿಯಲ್ಲಿಯೇ ಇದ್ದರೂ ಕನಯಿತ್ರಿಯ ಕಲ್ಪನಾಚಾತುರ್ಯ ಮತ್ತು ಅನುಭವಗಳೂ ಮೂಡಿಬಂದಿರುವವು. ವಿನೇಕಮೇವ ಸಚಿನಮ್‌ ಧನುರೇವ ವರೂಥಿನೀವ*್‌ | ಬಾಹುಮೇವ ರಣೋತ್ಸಾಹೇ ಯಃ ಸಹಾಯಮಮನ್ಮತ ಬುಕ್ಕರಾಜನು ವಿವೇಕವೇ ಮಂತ್ರಿ, ಧನುಷ್ಯವೇ ಸೈನ್ಯ, ಬಾಹುವೇ ಯುದ್ಧದಲ್ಲಿ ಸಹಾಯಕ ಎಂದು ಭಾವಿಸಿದ್ದು ಎಂಬ ವರ್ಣನೆ ಬುಕ್ಳನ ವ್ಯಕ್ತಿತ್ವದ ಘನತೆಯನ್ನು ತೋರಿಸುತ್ತದೆ.

ಯಸ್ಯ ಕೀರ್ತಾ ಪ್ರಸರ್ಪಂತ್ಕಾ ಗುಣಕರ್ಪೂರಶಾಲಿನಃ |

ಜಗದಂಡಕರಂಡಸ್ಕ ಕ್ಸಾಮುಕಂಚುಲಿಕಾಯಿತವಂ್‌ ಸುತ್ತಲೂ ಹಬ್ಬುತ್ತಿರುವ ಬುಕ್ಕರಾಜನ ಕೀರ್ತಿಯು ಅವನ ಗುಣಕರ್ಪೂರನನ್ಸಿಟ್ಟಿರುವ ಜಗತ್ತಿಂಬ ಕರಂಡಕಕ್ಕೆ ಹೊದಿಸುವ ರೇಶಿಮೆಯ ಬಟ್ಟಿಯಾಯಿತು ಎಂಬಲ್ಲಿ ಕಲ್ಪನೆಯ ಚಾತುರ್ಯವಿದೆ. ಬುಕ್ಕರಾಜನನ್ನು ವರ್ಣಿಸಿ ಅವನ ರಾಜಧಾನಿಯಾದ ವಿಜಯ

ನಗರದ ಸುಂದರವಾದ ಶಬ್ದಚಿತ್ರವನ್ನು ಗಂಗಾದೇವಿಯು ಕೊಡುವಳು.

ತುಂಗಭದ್ರೆಯಿಂದ ಸುತ್ತುವರಿದ ವಿಜಯನಗರವು ಅಮರಾವತಿ ಯನ್ನೇ ಹೋಲುತ್ತಿತ್ತು. ಮೇರುಪರ್ವತದಂಥ ಗೋಪುರಗಳು,

ಎ೪ ಸಂಸ್ಕೃತ ಕವಯಿತ್ರಿಯರು

ವಸಂತಖುತುವಿನ ಆವಾಸಗಳಂತಿದ್ದ ತೋಟಗಳು,